ಅಂಗನವಾಡಿ ಕಾರ್ಯಕರ್ತೆ ಹಾಗೂ ಸಹಾಯಕರ ಹುದ್ದೆಗೆ ಅರ್ಜಿ ಆಹ್ವಾನ

0

ಸುಳ್ಯ ತಾಲೂಕಿನ ಅಂಗನವಾಡಿಗಳಲ್ಲಿ ಖಾಲಿ ಇರುವ ಕಾರ್ಯಕರ್ತೆ ಹಾಗೂ ಸಹಾಯಕ ಹುದ್ದೆಗೆ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ಜಾಲ್ಸೂರು ಗ್ರಾಮದ ಮರಸಂಕ ಅಂಗನವಾಡಿ ಹಾಗೂ ಸುಳ್ಯ ಕಲ್ಲುಮುಟ್ಲು ಅಂಗನವಾಡಿ ಕಾರ್ಯಕರ್ತೆಯರ ಹುದ್ದೆ ಖಾಲಿಯಾಗಿದ್ದು ಅರ್ಹರಿಂದ ಅರ್ಜಿ ಆಹ್ವಾನಿಸಲಾಗಿದೆ.
ಕೊಡಿಯಾಲ ಗ್ರಾಮದ ಬಾಚೋಡಿ, ಅರಂತೋಡು ಗ್ರಾಮದ ಅಡ್ತಲೆ, ಬಳ್ಪ ಗ್ರಾಮದ ಕೇನ್ಯ ಅಂಗನವಾಡಿಗಳ ಸಹಾಯಕಿ ಹುದ್ದೆ ಖಾಲಿಯಿದ್ದು ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ಅರ್ಜಿ ಸಲ್ಲಿಸುವವರು ಮಾ.೧೭ರ ಒಳಗೆ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದ್ದು, ಸುಳ್ಯದ ಶಿಶು ಅಭಿವೃದ್ಧಿ ಯೋಜನಾ ಕಚೇರಿಗೆ ಅರ್ಜಿ ಸಲ್ಲಿಸಬಹುದು. ಹೆಚ್ಚಿನ ಮಾಹಿತಿಗಾಗಿ ೦೮೨೫೭ – ೨೩೦೨೩೯ ನ್ನು ಸಂಪರ್ಕಿಸಬಹುದಾಗಿದೆ.