ಶ್ರೀ ಹರಿಹರೇಶ್ವರ ದೇವಸ್ಥಾನದ ಮಹಾ ಜಾತ್ರೋತ್ಸವ, ಮೂರು ದಿನಗಳ ಜಾತ್ರೆ ಇಂದು ಸಂಪನ್ನ

0

ಶ್ರೀ ಹರಿಹರೇಶ್ವರ ದೇವಸ್ಥಾನ ಜಾತ್ರೋತ್ಸವ ಫೆ.20 ರಿಂದ ಆರಂಭವಾಗಿ ಫೆ.22 ತನಕ ನಡೆಯಿತು.

ಮೊದಲ ದಿನ ಬೆಳಗ್ಗೆ ಊರವರಿಂದ ಹಸಿರು ಕಾಣಿಕೆ ಸಮರ್ಪಣೆ ನಡೆದಿದ್ದು, ಮಹಾಪೂಜೆ ಬಳಿಕ ಅನ್ನಸಂತರ್ಪಣೆ ನಡೆಯಿತು. ಸಂಜೆ ತಂತ್ರಿಗಳ ಆಗಮನದ ಬಳಿಕ ಮಹಾಪೂಜೆ, ರಾತ್ರಿ ಅನ್ನಸಂತರ್ಪಣೆ ನಡೆಯಿತು. ಫೆ. 21 ಬೆಳಗ್ಗೆ ಗಣಪತಿ ಹವನ, ಕಲಶಪೂಜೆ, ಕಲಶಾಭಿಶೇಕ ನಡೆದು ಮಧ್ಯಾಹ್ನ ಮಹಾಪೂಜೆ ನಡೆದು ಅನ್ನಸಂತರ್ಪಣೆ ನಡೆಯಿತು.

ಸಾಯಂಕಾಲ ದೀಪಾರಾಧನೆ, ಚೆಂಡೆವಾದನ ನಡೆದು ಮಹಾಪೂಜೆ ನಡೆದು ರಾತ್ರಿ ದೇವರ ಬಲಿ ಉತ್ಸವ ಹೊರಟು ವಿವಿಧ ಕಲಾ ಪರಿಕರ, ಮಂತ್ರ ಘೋಸದೊಂದಿದೆ ದೇವರ ಬಲಿ ಉತ್ಸವ ನಡೆಯಿತು. ಬಳಿಕ ವಸಂತಕಟ್ಟೆ ಪೂಜೆ, ಬಟ್ಟಲು ಕಾಣಿಕೆ, ರಾಜಾಂಗಣ ಪ್ರಸಾದ ನಡೆಯಿತು. ಅಂದು ಬೆಳಿಗ್ಗೆಯಿಂದ ಸಂಜೆವರೆಗೆ ಅರ್ಧ ಏಕಾಹ ಭಜನೆ ಜರಗಿತು. ಶ್ರೀ ಹರಿಹರೇಶ್ವರ ಭಜನಾ ಮಂಡಳಿ ಹರಿಹರ ಕೊಲ್ಲಮೊಗ್ರ ದಾಸ ಸಾಹಿತ್ಯ ಪ್ರೊಜೆಕ್ಟ್‌ ತಿರುಪತಿ ತಿರುಮಲ ನೇತೃತ್ವ ವಹಿಸಿತ್ತು. ಸಾಯಂಕಾಲ ನೃತ್ಯ ಭಜನೆ ನಡೆದು. ಬಾಲಚಂದ್ರ ಪೆರಾಜೆ ಇವರಿಂದ ಸ್ಯಾಕ್ರೋಫೋನ್ ವಾದನ ನಡೆಯಿತು.

ಫೆ.22 ರ ಬೆಳಿಗ್ಗೆಯಿಂದ ಉಳ್ಳಾಕ್ಲು ಮತ್ತು ಪರಿವಾರ ದೈವಗಳ ನೇಮೋತ್ಸವ ನಡೆಯಿತು. ವ್ಯವಸ್ಥಾಪನಾ ಸಮಿತಿ ಸದಸ್ಯರು, ಅಭಿವೃದ್ಧಿ ಸಮಿತಿಯವರು, ವಿವಿಧ ಸಮಿತಿಗಳ ಪದಾಧಿಕಾರಿಗಳು, ಸದಸ್ಯರು, ಭಕ್ತಾದಿಗಳು ಕಾರ್ಯಕ್ರಮ ಯಶಸ್ವಿಗೆ ಸಹಕರಿಸಿದರು.

ಸಾಂಸ್ಕೃತಿಕ ಕಾರ್ಯಕ್ರಮ: ಫೆ. 20 ರ ಸಂಜೆ ವಸಂತ ಆಚಾರ್ಯ ಸಾರಥ್ಯದ ಪ್ಯೂಶನ್ ಇನ್‌ಸ್ಟಿಟೂಟ್ ಆಫ್ ಡಾನ್ಸ್ ವಿದ್ಯಾರ್ಥಿಗಳಿಂದ ವೈವಿಧ್ಯಮಯ ನೃತ್ಯ ವೈಭವ, ಬಾಳುಗೋಡು, ಐನೆಕಿದು, ಹರಿಹರ, ಕರಂಗಲ್ಲು ಮತ್ತು ಮುಳ್ಳುಬಾಗಿಲು ಗ್ರಾಮಸ್ಥರಿಂದ ವಿವಿಧ ವಿನೋದಾವಳಿಗಳು ನಡೆಯಿತು.

ರಾತ್ರಿ ಹಿಂದೂ ಜಾಗರಣ ವೇದಿಕೆ ಕರ್ನಾಟಕ ದಕ್ಷಿಣ ಪ್ರಾಂತ, ಮಾತೃ ಸುರಕ್ಷಾ ಸಂಯೋಜಕ ಬಿ.ಗಣಪತಿ ಭಟ್‌ ಕೆದಿಲ ಧಾರ್ಮಿಕ ಉಪನ್ಯಾಸ ನೀಡಿದರು.

ಫೆ. 21 ರ ರಾತ್ರಿ ದೇವರ ಬಲಿ ಬಳಿಕ ಶ್ರೀ ಹರಿಹರೇಶ್ವರ ಯಕ್ಷಗಾನ ಕಲಾ ಸಂಘ ಮತ್ತು ಅತಿಥಿ ಕಲಾವಿದರಿಂದ “ಶೂರ್ಪನಖಾ ಮಾನಭಂಗ-ಮಾಯಾಮೃಗ” ಯಕ್ಷಗಾನ ಬಯಲಾಟ ನಡೆಯಿತು.