ಮಡಿಕೇರಿ ಬಳಿ ಸುಳ್ಯದ ದೋಸ್ತ್ ವಾಹನಕ್ಕೆ ಕಾರು ಢಿಕ್ಕಿ

0

ವಾಹನ ಪಲ್ಟಿ : ಚಾಲಕ ಪಾರು

ಸುಳ್ಯದ ಬಿ ಎಂ ಎ ಫ್ರೂಟ್ ಅಂಡ್ ವೆಜಿಟೇಬಲ್ ಸಂಸ್ಥೆಗೆ ಸೇರಿದ ದೋಸ್ತ್ ವಾಹನ ಮಡಿಕೇರಿ ಕಡೆ ಹೋಗುತ್ತಿದ್ದ ಸಂದರ್ಭ ಮಡಿಕೇರಿಯಿಂದ ಸುಳ್ಯದತ್ತ ಬರುತ್ತಿದ್ದ ಕಾರು ಡಿಕ್ಕಿ ಹೊಡೆದು ದೋಸ್ತ್ ವಾಹನ ಪಲ್ಟಿಯಾದ ಘಟನೆ ನಡೆದಿದೆ.

ಘಟನೆಯಿಂದ ದೋಸ್ತ್ ವಾಹನ ಚಾಲಕನಿಗೆ ಅಲ್ಪ ಸ್ವಲ್ಪ ಗಾಯಗಳಾಗಿದ್ದು, ಅವರನ್ನು ಸುಳ್ಯ ಕೆವಿಜಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದು ಬಂದಿದೆ.

ಮಡಿಕೇರಿ ಘಾಟಿ ರಸ್ತೆಯ ತಿರುವಿನಲ್ಲಿ ಮಡಿಕೇರಿ ಕಡೆಯಿಂದ ವೇಗವಾಗಿ ಬಂದ ಕಾರು ಮತ್ತೊಂದು ವಾಹನವನ್ನು ಹಿಂದಿಕ್ಕಿ ಬರಲು ಪ್ರಯತ್ನಿಸಿದಾಗ ಈ ಅಪಘಾತ ಸಂಭವಿಸಿದೆ ಎಂದು ಸ್ಥಳೀಯರಿಂದ ಮಾಹಿತಿ ಬಂದಿದೆ.