ಎಸ್.ಡಿ.ಎಂ.ಸಿ. ಸಮಾವೇಶದಲ್ಲಿ ಮಿತ್ತಡ್ಕ ಶಾಲಾ ಅಧ್ಯಕ್ಷ ರಿಗೆ ಸನ್ಮಾನ

0

ಕರ್ನಾಟಕ ರಾಜ್ಯ ಎಸ್.ಡಿ.ಎಂ.ಸಿ. ಸಮನ್ವಯ ವೇದಿಕೆ ದ.ಕ. ಜಿಲ್ಲೆ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ದ.ಕ. ಇದರ ಸಹಯೋಗದಲ್ಲಿ ಎಸ್.ಡಿ.ಎಂ.ಸಿ. 21 ನೇ ವರ್ಷಾಚರಣೆ ಪ್ರಯುಕ್ತ ಜಿಲ್ಲಾ ಮಟ್ಟದ ಕ್ರಿಯಾಶೀಲ ಶಾಲಾಭಿವೃದ್ಧಿ ಸಮಿತಿ ಹಾಗೂ ಮೇಲುಸ್ತುವಾರಿ ಸಮಿತಿಗಳಿಗೆ ಅಭಿನಂದನಾ ಕಾರ್ಯಕ್ರಮ ‌ಹಾಗೂ ದ.ಕ. ಜಿಲ್ಲಾ ಮಟ್ಟದ ದ್ವಿತೀಯ ಸಮಾವೇಶವು ಫೆ.28 ರಂದು ಬಂಟ್ವಾಳದಲ್ಲಿ ಜರುಗಿತು.


ಸುಳ್ಯ ತಾಲೂಕಿನಿಂದ ಪ್ರತಿನಿಧಿಸಿದ ಮರ್ಕಂಜ ಗ್ರಾಮದ ಸ.ಹಿ.ಪ್ರಾ.ಶಾಲೆ ಮಿತ್ತಡ್ಕ ಇಲ್ಲಿಯ ಶಾಲಾಭಿವೃದ್ಧಿ ಮೇಲುಸ್ತುವಾರಿ ಸಮಿತಿಯ ಎಸ್.ಡಿ.ಎಂ.ಸಿ.ಗೆ ಕ್ರಿಯಾಶೀಲ ಅಧ್ಯಕ್ಷ ರಾಗಿ ಸೇವೆ ಸಲ್ಲಿಸುತ್ತಿರುವ ಶ್ರೀಮತಿ ಸಂಧ್ಯಾದೋಳ ಶಾಲೆಯಲ್ಲಿ ಮಾಡಿದ ಕೆಲಸ ಕಾರ್ಯಗಳಿಗಾಗಿ 2023 ನೇ ಸಾಲಿನ ಕ್ರಿಯಾಶೀಲ ಅತ್ಯುತ್ತಮ ಅಧ್ಯಕ್ಷರೆಂದು ಪರಿಗಣಿಸಿ ಜಿಲ್ಲಾ ಮಟ್ಟದಲ್ಲಿ ಗೌರವಿಸಲಾಯಿತು.

ಈ ಸಂದರ್ಭದಲ್ಲಿ ಎಸ್.ಡಿ.ಎಂ.ಸಿ. ಸದಸ್ಯರಾದ ಹೇಮಕುಮಾರ್ ಜೋಗಿಮೂಲೆ, ಯಶೋದ ಹಲ್ದಡ್ಕ, ರಂಜಿನಿ ಬೊಮ್ಮಾರು, ಹೇಮಕುಮಾರ್ ಕಂಜಿಪಿಲಿ, ಸಂಜೀವ ಅರಮನೆಗಯ, ಪೋಷಕರಾದ ಸತೀಶ ಮಿತ್ತಡ್ಕ, ಗಂಗಾಧರ ದೋಳ, ಗೋವಿಂದಭಟ್ ಬಳ್ಳಕಾನ, ಶಿಕ್ಷಕಿ ಸಾವಿತ್ರಿ ಇದ್ದರು.