ಕೆ.ವಿ.ಜಿ.ಪಾಲಿಟೆಕ್ನಿಕ್ : ವಿಭಾಗ ಮಟ್ಟದ ಎನ್ನೆಸ್ಸೆಸ್ ಶಿಬಿರ ಸಮಾರೋಪ

0

ಸುಳ್ಯ ಕುರುಂಜಿ ವೆಂಕಟ್ರಮಣ ಗೌಡ ಪಾಲಿಟೆಕ್ನಿಕ್ ನ ಆಶ್ರಯದಲ್ಲಿ ಗುತ್ತಿಗಾರು ಗ್ರಾಮದ ವಳಲಂಬೆಯಲ್ಲಿ ನಡೆದ ದಕ್ಷಿಣ ಕರ್ನಾಟಕ ವಿಭಾಗ ಮಟ್ಟದ ಅಂತರ್ ಪಾಲಿಟೆಕ್ನಿಕ್ ಎನ್ನೆಸ್ಸೆಸ್ ಶಿಬಿರ ಸಮಾರೋಪ ಗೊಂಡಿತು. ಕಾಲೇಜಿನ ಪ್ರಾಂಶುಪಾಲ ಜಯಪ್ರಕಾಶ ಕೆ ಯವರ ಅಧ್ಯಕ್ಷತೆಯಲ್ಲಿ ನಡೆದ ಸಮಾರಂಭದಲ್ಲಿ ಸಾಹಿತಿ ಎ.ಕೆ ಹಿಮಕರ ಸಮಾರೋಪ ಭಾಷಣ ಮಾಡಿದರು. ಮುಖ್ಯ ಅತಿಥಿಗಳಾಗಿ ಗ್ರಾಮ ಪಂಚಾಯತ್ ಉಪಾಧ್ಯಕ್ಷೆ ಪ್ರಮಿಳಾ ಭಾಸ್ಕರ್, ಸಾಹಿತಿ ಯೋಗೀಶ್ ಹೊಸೋಳಿಕೆ, ಶಂಖಪಾಲ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನ ಸಮಿತಿಯ ಮಾಜಿ ಅಧ್ಯಕ್ಷ ಕೇಶವ ಹೊಸೋಳಿಕೆ, ಎಸ್.ಡಿ.ಎಂ.ಸಿ ಅಧ್ಯಕ್ಷ ರವೀಶ್ ಕುಮಾರ್, ಉಪಾಧ್ಯಕ್ಷೆ ಅಭಿಲಾಷಾ ಎಸ್.ಎಂ, ಬಾಲವಿಕಾಸ ಸಮಿತಿಯ ಅಧ್ಯಕ್ಷೆ ಸ್ವಾತಿ ಕೆ ಉಪಸ್ಥಿತರಿದ್ದು ಶುಭ ಹಾರೈಸಿದರು. ಎನ್ನೆಸ್ಸೆಸ್ ಸೇವಾ ಸಂಗಮದ ಸಂಘಟನಾ ಕಾರ್ಯದರ್ಶಿ ಸುಜಿತ್ ಎಂ. ಎಸ್ ಹಾಗೂ ಘಟಕದ ನಾಯಕರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಮುಖ್ಯ ಶಿಬಿರಾಧಿಕಾರಿ ಚಂದ್ರಶೇಖರ ಬಿಳಿನೆಲೆ ಶಿಬಿರದ ಯಶಸ್ಸಿಗೆ ಸಹಕರಿಸಿದವರನ್ನು ಗೌರವಿಸಿದರು. ಕಾರ್ಯಕ್ರಮಾಧಿಕಾರಿ ಸುನಿಲ್ ಕುಮಾರ್ ಎನ್.ಪಿ ಶಿಬಿರದ ವರದಿ ಮಂಡಿಸಿ ಸ್ವಾಗತಿಸಿದರು. ಶಾಲಾ ಮುಖ್ಯೋಪಾದ್ಯಾಯಿನಿ ಪ್ರಮೀಳಾ ಪಿ.ಎಸ್ ವಂದಿಸಿದರು. ಸ್ವಯಂ ಸೇವಕಿ ಗೀತಾಂಜಲಿ ನಿರೂಪಿಸಿದರು.
ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ವಳಲಂಬೆಯಲ್ಲಿ ಒಂದು ವಾರ ನಡೆದ ಶಿಬಿರದಲ್ಲಿ ವಠಾರದ ಸ್ವಚ್ಛತೆ, ಉದ್ದಜಿಗಿತ ಅಂಕಣ ನಿರ್ಮಾಣ, ತೆಂಗಿನ ಹೊಂಡ ಹಾಗೂ ಬಾಳೆ ಹೊಂಡ ನಿರ್ಮಾಣ ಮುಂತಾದ ಕೆಲಸಗಳನ್ನು ಶ್ರಮದಾನದ ಮೂಲಕ ನಿರ್ವಹಿಸಲಾಯಿತು. ಶೈಕ್ಷಣಿಕ ಕಾರ್ಯಕ್ರಮದಲ್ಲಿ ಡಾ.ಅನುರಾಧಾ ಕುರುಂಜಿ, ಭವಾನಿಶಂಕರ ಅಡ್ತಲೆ, ರಂಗಸ್ವಾಮಿ ಹಾಗೂ ಶ್ರೀಧರ್ ಎಂ.ಕೆ ವಿವಿಧ ವಿಷಯಗಳಲ್ಲಿ ತರಬೇತಿ ನೀಡಿದರು, ಅಲ್ಲದೇ ಭಾಷಣ, ಚಿತ್ರಕಲೆ, ಗಾಯನ, ಪ್ರಹಸನ ಮುಂತಾದ ಸ್ಪರ್ಧೆಗಳನ್ನು ನಡೆಸಿ ಬಹುಮಾನ ವಿತರಿಸಲಾಯಿತು.