ಪಂಜ: ಅಂಚೆಪಾಲಕಿ ಶ್ರೀಮತಿ ಪ್ರಭಾವತಿಯವರಿಗೆ ಬೀಳ್ಕೊಡುಗೆ

0

ಕೇನ್ಯ ಅಂಚೆ ಕಚೇರಿಯಲ್ಲಿ ಅಂಚೆ ಪಾಲಕಿಯಾಗಿ ಸೇವೆ ಸಲ್ಲಿಸುತ್ತಿದ್ದ ಶ್ರೀಮತಿ ಪ್ರಭಾವತಿ ಯವರು ನಿವೃತ್ತಗೊಂಡಿದ್ದು ಅವರಿಗೆ ಬೀಳ್ಕೊಡುಗೆ ಸನ್ಮಾನ ಸಮಾರಂಭ
ಮಾ.7ರಂದು ಪಂಜ ಉಪ ಅಂಚೆ ಕಚೇರಿಯಲ್ಲಿ ಜರುಗಿತು.
ಪಂಜ ಉಪ ಕಚೇರಿಯ ಅಂಚೆ ಪಾಲಕ ಅಣ್ಣು ಸಭಾಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಸುಳ್ಯ ಅಂಚೆ ನಿರೀಕ್ಷಕ
ಸುರೇಶ್, ಅಂಚೆ ಮೇಲ್ವಿಚಾರಕರಾದ ಎಸ್ ಬಾಬು, ದೇವದಾಸ್ ಉಪಸ್ಥಿತರಿದ್ದು ಶುಭ ಹಾರೈಸಿದರು.


ಬಳ್ಪ ಅಂಚೆ ಪಾಲಕಿ ಶ್ರೀಮತಿ ಯಶೋಧ ಶುಭ ಹಾರೈಸಿದರು. ಶ್ರೀಮತಿ ಪ್ರಭಾವತಿ ಯವರ ಪತಿ ತಿರುಮಲೇಶ್ವರ ಭಟ್, ಅಂಚೆ ಇಲಾಖೆಯ ಸಿಬ್ಬಂದಿಗಳು ಉಪಸ್ಥಿತರಿದ್ದರು.ಕಾರ್ಯಕ್ರಮವನ್ನು ಕೂತ್ಕುಂಜ ಅಂಚೆ ಪಾಲಕಿ ಶ್ರೀಮತಿ ಉಷಾ ನಿರೂಪಿಸಿದರು.ಶ್ರೀಮತಿ ಪ್ರಭಾವತಿ ಯವರು ಸುಮಾರು 43 ವರುಪ ಅಂಚೆಪಾಲಕಿಯಾಗಿ ಸೇವೆ ಸಲ್ಲಿಸಿ ನಿವೃತ್ತ ಗೊಂಡಿದ್ದಾರೆ.