ಗ್ಯಾಸ್ ಸಿಲಿಂಡರ್‌ನಲ್ಲಿ ನೀರು!

0


ಅರಂಬೂರಿನ ಪಾಲಡ್ಕದ ಗ್ರಾಹಕರೊಬ್ಬರಲ್ಲಿದ್ದ ಗ್ಯಾಸ್ ಹಂಡೆಯಲ್ಲಿ ನೀರು ಕಂಡು ಬಂದ ವಿದ್ಯಮಾನವೊಂದು ವರದಿಯಾಗಿದೆ.
ಪಾಲಡ್ಕದ ದಿನಕರ ನಾಯಕ್ ಎಂಬವರು ಅಡುಗೆಗೆ ಗ್ಯಾಸ್ ಬಳಸುತ್ತಿದ್ದು, ಕೆಲವು ದಿನದ ಹಿಂದೆ ಹೊಸ ಗ್ಯಾಸ್ ಹಂಡೆ ಫಿಟ್ ಮಾಡಲಾಗಿತ್ತು. ಅದರಲ್ಲಿ ಅಡುಗೆ ಮಾಡುತ್ತಿದ್ದಾಗ ಇದ್ದಕ್ಕಿದ್ದಂತೆ ಸ್ಟವ್ ಉರಿಯುವುದು ನಿಂತಿತು. ಪರಿಶೀಲಿಸಿದಾಗ ಪೈಪ್ ಮೂಲಕ ಗ್ಯಾಸ್ ಬರುತ್ತಿರಲಿಲ್ಲ.

ಗ್ಯಾಸ್ ಹಂಡೆಯನ್ನು ಪರಿಶೀಲಿಸಿದಾಗ ಅದರೊಳಗೆ ನೀರು ಇರುವಂತೆ ಸದ್ದು ಬರುತ್ತಿತ್ತು. ಹಂಡೆಯನ್ನು ಮಗುಚಿ ಹಿಡಿದಾಗ ರೆಗ್ಯುಲೇಟರ್ ಅಳವಡಿಸುವ ರಂಧ್ರದ ಬಳಿಯಿಂದ ಬಕೆಟ್‌ನೊಳಗೆ ನೀರು ಬೀಳತೊಡಗಿತು. ಈ ವಿಚಾರವನ್ನು ಗ್ಯಾಸ್ ವಿತರಕರ ಗಮನಕ್ಕೆ ತಂದಾಗ ಅವರು ಹಂಡೆಯನ್ನು ಬದಲಾಯಿಸಿ ಕೊಟ್ಟರೆಂದು ತಿಳಿದು ಬಂದಿದೆ.