ಇಂದು ಬಿಜೆಪಿ ವಿಜಯ ಸಂಕಲ್ಪ ಯಾತ್ರೆ ಪ್ರಯುಕ್ತ ಸುಳ್ಯದಲ್ಲಿ ರೋಡ್ ಶೋ

0

ಮಧ್ಯಾಹ್ನ 1 ರಿಂದ 5ರ ತನಕ ರಸ್ತೆಯ ಇಕ್ಕೆಲಗಳಲ್ಲಿ ವಾಹನ ನಿಲ್ಲಿಸದಂತೆ ನ.ಪಂ. ಅಧ್ಯಕ್ಷರ ಮನವಿ

ಇಂದು (ಮಾರ್ಚ್ 11ರಂದು) ಭಾರತೀಯ ಜನತಾ ಪಾರ್ಟಿ ಯ ವಿಜಯ ಸಂಕಲ್ಪ ಯಾತ್ರೆ ಅಂಗವಾಗಿ ಅಪರಾಹ್ನ ನಗರದಲ್ಲಿ ರೋಡ್
ಶೋ ನಡೆಯಲಿದ್ದು, ಸುಗಮ ವಾಹನ ಸಂಚಾರದ ದೃಷ್ಟಿಯಿಂದ ನಗರದ ಮುಖ್ಯ ರಸ್ತೆಯ ಇಕ್ಕೆಲಗಳಲ್ಲಿ ಮಧ್ಯಾಹ್ನ 1.00ರಿಂದ ಸಂಜೆ 5.00ರ ತನಕ ವಾಹನ ನಿಲುಗಡೆಯನ್ನು ಮಾಡದಿರುವಂತೆ ನ.ಪಂ. ಅಧ್ಯಕ್ಷ ವಿನಯ ಕುಮಾರ್ ಕಂದಡ್ಕ ವಿನಂತಿಸಿಕೊಂಡಿದ್ದಾರೆ.