ಮಡಪ್ಪಾಡಿ : ನೂತನ ಘಟ ಸಮಿತಿ ಉದ್ಘಾಟನೆ

0

ಒಡಿಯೂರು ಶ್ರೀ ಗ್ರಾಮ ವಿಕಾಸ ಯೋಜನೆಯ ನೂತನ ಮಡಪ್ಪಾಡಿ ಘಟ ಸಮಿತಿಯು ಮಾ.5ರಂದು ಮಡಪ್ಪಾಡಿ ಹಿ.ಪ್ರಾ.ಶಾಲೆಯಲ್ಲಿ ಉದ್ಘಾಟನೆಗೊಂಡಿತು.
ನೂತನ ಘಟ ಸಮಿತಿಯನ್ನು ಮಡಪ್ಪಾಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಪಿ.ಸಿ.ಜಯರಾಮ ಉದ್ಘಾಟಿಸಿದರು. ಮಡಪ್ಪಾಡಿ ಗ್ರಾ.ಪಂ. ಅಧ್ಯಕ್ಷ ಮಿತ್ರದೇವ ಮಡಪ್ಪಾಡಿ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಮಡಪ್ಪಾಡಿ ಹಾಲು ಉತ್ಪಾದಕರ ಸಹಕಾರಿ ಸಂಘದ ಅಧ್ಯಕ್ಷೆ ಶಕುಂತಲಾ ಕೇವಳ, ತಾಲೂಕು ಮೇಲ್ವಿಚಾರಕಿ ಗೀತಾ ನೆಟ್ಟಾರು, ಗುತ್ತಿಗಾರು ವಲಯಾಧ್ಯಕ್ಷ ಜಯರಾಮ ಪೈಕ ಉಪಸ್ಥಿತರಿದ್ದರು.
ಮಡಪ್ಪಾಡಿ ಗ್ರಾಮದ ಸೇವಾನಿರತೆ ಕವಿತಾ ಜೀರ್ಮುಖಿ, ಹಾಗೂ ಸಂಘದ ಸದಸ್ಯರು ಗುತ್ತಿಗಾರು ವಲಯದ ಸೇವಾದೀಕ್ಷಿತೆಯರು ಉಪಸ್ಥಿತರಿದ್ದರು.