ಕಾಟೂರಿನಲ್ಲಿ ಚುನಾವಣಾ ಬಹಿಷ್ಕಾರ ಬ್ಯಾನರ್

0

ಕಳೆದ ಕೆಲವು ತಿಂಗಳುಗಳಿಂದ ಸುಳ್ಯದ ನಾನ ಭಾಗಗಳಲ್ಲಿ ರಸ್ತೆ, ಮೂಲಭೂತ ಸೌಕರ್ಯಗಳ ಬೇಡಿಕೆಯನ್ನು ಇಟ್ಟು ಮತದಾನ ಬಹಿಷ್ಕಾರದ ಬ್ಯಾನರ್ಗಳನ್ನು ಅಳವಡಿಸುತ್ತಿರುವುದು ಕಂಡು ಬರುತ್ತಿದೆ.
ಇದೀಗ ಜಾಲ್ಸೂರು ಗ್ರಾಮದ ಕಾಟೂರು ಭಾಗದ ನಿವಾಸಿಗಳು ಕಾಟೂರು ಭಾಗದಲ್ಲಿ ಅಭಿವೃದ್ಧಿ ಕುರಿತಾಗಿ ನಿರಂತರವಾಗಿ ಹಲವು ವರ್ಷಗಳಿಂದ ಅಧಿಕಾರ ಕೇಂದ್ರಗಳಿಂದ ಆಗುತ್ತಿರುವ ಕಡಗಣನೆಯಿಂದಾಗಿ ಬೇಸತ್ತು ಮುಂಬರುವ ಚುನಾವಣೆಯನ್ನು ಬಹಿಸ್ಕರಿಸುತ್ತೇವೆ ಎಂಬ ಬ್ಯಾನರನ್ನು ಅಳವಡಿಸಿದ್ದಾರೆ.