ಕುಕ್ಕೆ ಸುಬ್ರಹ್ಮಣ್ಯದಲ್ಲಿ ಸಾಮೂಹಿಕ ವಿವಾಹ

0

ನಾಲ್ಕು ಜೋಡಿಗಳು ಹಸೆಮಣೆಗೆ

ಕುಕ್ಕೆ ಶ್ರೀ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನದ ನೇತೃತ್ವದಲ್ಲಿ ರಾಜ್ಯ ಸರ್ಕಾರದ ಯೋಜನೆಯಂತೆ ಸಾಮೂಹಿಕ ವಿವಾಹ ಕಾರ್ಯಕ್ರಮ ಮಾ. 12 ರಂದು ನಡೆಯಿತು. ಇದರಲ್ಲಿ ಒಟ್ಟು 4 ಜೋಡಿಗಳು ಸಪ್ತಪದಿ ತುಳಿದು ಗೃಹಸ್ಥಾಶ್ರಮವಕ್ಕೆ ಕಾಲಿಟ್ಟವು.
ಈ ಸಂದರ್ಭ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಮೋಹನರಾಂ ಸುಳ್ಳಿ, ವ್ಯವಸ್ಥಾಪನಾ ಸಮಿತಿ ಸದಸ್ಯ ಶ್ರೀವತ್ಸಾ, ಶ್ರೀಮತಿ ಶೋಭಾಗಿರಿಧರ್, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ನಿಂಗಯ್ಯ, ಸಹಾಯಕ ಕಾರ್ಯನಿರ್ವಹಣಾಧಿಕಾರಿ ಪುಷ್ಪಲತಾ, ದೇವಾಲಯ ಸಿಬ್ಬಂದಿಗಳಾದ ಶಿವಸುಬ್ರಹ್ಮಣ್ಯ, ಜಯರಾಮ ರಾಂ, ಉದಯಕುಮಾರ್, ಪ್ರಮೋದ್ ಮತ್ತಿತರು ಉಪಸ್ಥಿತರಿದ್ದರು.

ಮದುವೆಯಾದ ಜೋಡಿಗಳು


ಕೃಷ್ಣಕುಮಾರ್ ಪಿ.ಎಂ – ಶೋಭಾ ಕೆ : ಸಂಪಾಜೆ ಗ್ರಾಮದ ಕಡೆಪಾಲ ಮುದ್ದ ಪಿ .ಎಂ ರವರ ಪುತ್ರ ಕೃಷ್ಣ ಕುಮಾರ್ ಪಿ.ಎಂ ರವರ ವಿವಾಹವು ಸಂಪಾಜೆ ಗ್ರಾಮದ ಕಡೆಪಾಲ ಕರಿಯ ರವರ ಪುತ್ರಿ ಶೋಭಾ ಕೆ ಅವರೊಂದಿಗೆ ನಡೆಯಿತು.

ಜಯಕುಮಾರ – ಸುನೀತಾ : ಮೈಸೂರು ಶ್ರೀರಾಂಪುರ ಮಾನಂದವಾಡಿ ರೋಡಿನ ರಂಗರಾಜುರವರ ಪುತ್ರ ಜಯಕುಮಾರ ರವರ ವಿವಾಹವು ಚಾಮರಾಜನಗರ ಗುಂಡ್ಲುಪೇಟೆ ಕಿಲಗೆರೆ ಗ್ರಾಮದ ಮಹದೇವಯ್ಯ ರವರ ಪುತ್ರಿ ಸುನೀತಾರೊಂದಿಗೆ ನಡೆಯಿತು.

ಸುನಿಲ್ – ಹರಿಣಾಕ್ಷಿ: ಕೊಲ್ಲಮೊಗ್ರ ಗ್ರಾಮದ ಬೆಂಡೊಡಿ ರಾಘವರವರ ಪುತ್ರ ಸುನಿಲ್ ರವರ ವಿವಾಹವು ಬೆಳ್ತಂಗಡಿ ತಾಲೂಕು ಧರ್ಮಸ್ಥಳ ಗ್ರಾಮದ ಅಶೋಕನಗರ ಮನೆ ಕುಂಞ ರವರ ಪುತ್ರಿ ಹರಿಣಾಕ್ಷಿ ಯೊಂದಿಗೆ ನಡೆಯಿತು.

ಗುರುಪ್ರಸಾದ್ – ಕಿರಣಕುಮಾರಿ : ಐವತೊಕ್ಲು ಗ್ರಾಮದ ಪಂಜ ಜೂನ್ ಕಾಲೇಜು ಬಳಿಯ ಡಿ. ಚಿನ್ನಪ್ಪಗೌಡರ ಪುತ್ರ ಗುರುಪ್ರಸಾದ್ ರವರ ವಿವಾಹವು ಕಡಬ ತಾಲೂಕು ಕುಟ್ರುಪ್ಪಾಡಿ ಗ್ರಾಮದ ಕಕ್ಕೆನಡ್ಕ ಮನೆ ದೇವಪ್ಪಗೌಡರ ಪುತ್ರಿ ಕಿರಣಕುಮಾರಿಯೊಂದಿಗೆ ನಡೆಯಿತು.

ಪೋಟೋ: ಶಾಂತಲ ಸ್ಟುಡಿಯೋ ಸುಬ್ರಹ್ಮಣ್ಯ