ಕೆ ವಿ ಜಿ ಸಿ ಇ -ಮೆಕ್ಯಾನಿಕಲ್ ಇಂಜಿನಿಯರಿಂಗ್ ವಿಭಾಗದಲ್ಲಿ ಶಿವರಾಮು ಎಚ್. ಟಿ.ಯವರಿಗೆ ಪಿ ಎಚ್ ಡಿ ಪದವಿ

0

ಇತ್ತೀಚೆಗೆ ವಿಶ್ವೇಶ್ವರಯ್ಯ ತಾಂತ್ರಿಕ ಮಹಾವಿದ್ಯಾಲಯದ ಘಟಿಕೋತ್ಸವದಲ್ಲಿ ಸುಳ್ಯದ ಕೆವಿಜಿ ಇಂಜಿನಿಯರಿಂಗ್ ಕಾಲೇಜಿನ ಮೆಕ್ಯಾನಿಕಲ್ ವಿಭಾಗದಲ್ಲಿ ಸಂಶೋಧನೆಯನ್ನು ನಡೆಸಿದ ಶಿವರಾಮು ಎಚ್. ಟಿ. ರವರು ಪಿ ಎಚ್ ಡಿ ಪದವಿಯನ್ನು ಪಡೆದುಕೊಂಡರು. ಇವರ ಸಂಶೋಧನಾ ಪ್ರಬಂಧ “Study on the Development of Wear Resistive CNT Reinforced Al-Si Nanocomposite” ನ್ನು ಕೆವಿಜಿ ತಾಂತ್ರಿಕ ಮಹಾವಿದ್ಯಾಲಯದ ಅಕಾಡೆಮಿಕ್ ಡೀನ್ ಹಾಗೂ ಮೆಕ್ಯಾನಿಕಲ್ ವಿಭಾಗದ ಮುಖ್ಯಸ್ಥರಾದ ಡಾ| ಉಮಾಶಂಕರ್ ಕೆ ಎಸ್ ರವರ ಮಾರ್ಗದರ್ಶನದಲ್ಲಿ ಸಿದ್ಧಪಡಿಸಿದ್ದಾರೆ.

ನ್ಯಾನೋ ಟೆಕ್ನಾಲಜಿ ಉಪಯೋಗಿಸಿ ಸಿದ್ಧಪಡಿಸಿದ ಕಾಂಪೋಸಿಟ್ ಮೆಟೀರಿಯಲ್ ನ ಬಗ್ಗೆ ಹಲವು ಅಂತರರಾಷ್ಟ್ರೀಯ ನಿಯತ ಕಾಲಿಕಗಳಲ್ಲಿ ಪ್ರಕಟಣೆಗೊಂಡಿದ್ದು, ಸಂಶೋಧನೆಯನ್ನು ಕಾಲೇಜಿನ ಮೆಕ್ಯಾನಿಕಲ್ ಇಂಜಿನಿಯರಿಂಗ್ ವಿಭಾಗದ ಸಂಶೋಧನಾ ಕೇಂದ್ರದಲ್ಲಿ ನಡೆಸಿದ್ದರು.