ಡಾ| ಉಮಾಶಂಕರ್ ಕೆ.ಎಸ್.ರವರ ಸಂಶೋಧನೆಗೆ ಪೇಟೆಂಟ್

0

ಕೆವಿಜಿ ಇಂಜಿನಿಯರಿಂಗ್ ಕಾಲೇಜಿನ ಅಕಾಡೆಮಿಕ್ ಡೀಮ್ ಮತ್ತು ಮೆಕ್ಯಾನಿಕಲ್ ಇಂಜಿನಿಯರಿಂಗ್ ವಿಭಾಗದ ಮುಖ್ಯಸ್ಥರಾದ ಡಾ. ಉಮಾಶಂಕರ್ ಕೆಎಸ್ ರವರು ನಡೆಸಿದ ಸಂಶೋಧನೆಗಾಗಿ Office of the controller General of Patents, Ministry of Commerce & Industry, Govt of India   ದಿಂದ ಪೇಟೆಂಟ್ ಲಭಿಸಿದೆ. ಇವರು ತಮ್ಮ ಸಂಶೋಧನಾ ವಿದ್ಯಾರ್ಥಿ ಶ್ರೀ ವಿಕ್ರಂ ಕೆ ವಿ ಜೊತೆ ಸಿದ್ಧಪಡಿಸಿದ “Stir Casting Route for Processing Metal matrix Nanocomposites”ಎಂಬುವುದು ನ್ಯಾನೋ ಕಾಂಪೋಸಿಟ್ ತಯಾರಿಸುವಲ್ಲಿ ಬಳಸುವ ಒಂದು ತಯಾರಿಕಾ ವಿಧಾನವಾಗಿದೆ. ಇವರ ಸಾಧನೆಗೆ ಆಡಳಿತ ಮಂಡಳಿ ಅಧ್ಯಕ್ಷರಾದ ಡಾ. ರೇಣುಕಾ ಪ್ರಸಾದ್ ಕೆ ವಿ., ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಉಜ್ವಲ್ ಯು ಜೆ ., ಪ್ರಾಂಶುಪಾಲರಾದ ಡಾ. ಸುರೇಶ ವಿ ರವರು ಅಭಿನಂದಿಸಿದ್ದಾರೆ.