ನಾಗಪಟ್ಟಣ ಸದಾಶಿವ ದೇವಸ್ಥಾನದ ವಾರ್ಷಿಕ ಮಹೋತ್ಸವ-ಧಾರ್ಮಿಕ ಸಭೆ, ಸಚಿವ ಅಂಗಾರರಿಂದ ಸಾಂಸ್ಕೃತಿಕ ಕಾರ್ಯಕ್ರಮದ ಉದ್ಘಾಟನೆ

0

ದೇವಾಲಯದ ಮಹತ್ವ ಹೆಚ್ಚಬೇಕಾದರೆ
ನಿಸ್ವಾರ್ಥ ಪರಿಶುದ್ಧ ಮನಸ್ಸು ಭಕ್ತಿಯ ಭಾವನೆ ಇರಬೇಕು-ಎಸ್.ಅಂಗಾರ

ಆಲೆಟ್ಟಿ ಗ್ರಾಮದ ನಾಗಪಟ್ಟಣ ಶ್ರೀ ಸದಾಶಿವ ದೇವಸ್ಥಾನದ ವಾರ್ಷಿಕ ಮಹೋತ್ಸವವು ಮಾ.12 ರಂದು ಬೆಳಗ್ಗೆ ಗಣಪತಿ ಹವನ ಉಗ್ರಾಣ ತುಂಬುವ ‌ಕಾರ್ಯಕ್ರಮದೊಂದಿಗೆ ಪ್ರಾರಂಭಗೊಂಡಿತು. ಸಂಜೆ
ಧಾರ್ಮಿಕ ಸಭೆಯು
ನಾಗಪಟ್ಟಣ ಶ್ರೀ ಸದಾಶಿವ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ದಿನೇಶ್ ಕೋಲ್ಚಾರು ರವರ ಅದ್ಯಕ್ಷ ತೆಯಲ್ಲಿ ನಡೆಯಿತು. ವಿಶೇಷ ಆಹ್ವಾನಿತರಾಗಿ ಮೀನುಗಾರಿಕೆ ಬಂದರು ಒಳನಾಡು ಜಲಸಾರಿಗೆ ಸಚಿವರಾದ ಎಸ್.ಅಂಗಾರ ರವರು ಸಾಂಸ್ಕೃತಿಕ ಕಾರ್ಯಕ್ರಮವನ್ನು ದೀಪ ಬೆಳಗಿಸಿದರು ಉದ್ಘಾಟಿಸಿ
“ಮನುಷ್ಯನಾದವನು ಪರಿಶುದ್ಧ ಮನಸ್ಸಿನಿಂದ ನಿಸ್ವಾರ್ಥತೆಯಿಂದ ಭಕ್ತಿಯ ಭಾವನೆ ಹೊಂದಿದಾಗ ಮುಕ್ತಿ ಹೊಂದಲು ಸಾಧ್ಯವಿದೆ. ದೇವಾಲಯದ ಮಹತ್ವ ಹೆಚ್ಚು ಹೆಚ್ಚಾಗಿ ಆಜರ್ಷಣೆಯ ಶ್ರದ್ಧಾ ಕೇಂದ್ರವಾಗಲಿದೆ. ದುರಾಸೆಗೆ ಕಡಿವಾಣ ಹಾಕಿ ಜೀವನದಲ್ಲಿ ವೈಚಾರಿಕ ಧಾರ್ಮಿಕ ಚಿಂತನೆಯೊಂದಿಗೆ ಸಾಂಸ್ಕೃತಿಕ ನೆಲೆಗಟ್ಟನ್ನು ಹೊಂದುವಂತಾಗಬೇಕು. ಆಲೆಟ್ಟಿ ಗ್ರಾಮದಲ್ಲಿರುವ ಎರಡು ದೇವಾಲಯವನ್ನು ಅಭಿವೃದ್ಧಿ ದೃಷ್ಟಿಯಿಂದ ಸಮಾನಾಗಿ ಕಾಣುತ್ತೇವೆ. ಈಗಾಗಲೇ ಆಲೆಟ್ಟಿ ದೇವಸ್ಥಾನದ ಸಭಾಭವನಕ್ಕೆ 2 ಕೋಟಿ ಅನುದಾನ ಮಂಜೂರು ಮಾಡಲಾಗಿದೆ. ನಾಗಪಟ್ಟಣ ದೇವಸ್ಥಾನದ ಸಭಾಭವನದ ನಿರ್ಮಾಣಕ್ಕೆ ಮುಂದಿನ ದಿನಗಳಲ್ಲಿ ಅನುದಾನ ಒದಗಿಸುವ ಪ್ರಾಮಾಣಿಕ ಪ್ರಯತ್ನಮಾಡುವವರಿದ್ದೇವೆ. ಮನುಷ್ಯನಾದವನಿಗೆ ಮೋಸ ಮಾಡಲು ಸಾಧ್ಯವಿದೆ. ದೇವರಿಗೆ ಮೋಸ ಮಾಡುವಷ್ಟು ದೊಡ್ಡ ಮನುಷ್ಯನಾಗಲು ಅಂಗಾರ ನಿಂದಲೂ ಸಾಧ್ಯವಿಲ್ಲ. ನಾಗಪಟ್ಟಣ ಸದಾಶಿವನ ಸಾನಿಧ್ಯದಲ್ಲಿ ಮೂಲಭೂತ ಸೌಕರ್ಯಗಳಲ್ಲಿ ಅತ್ಯಂತ ಅವಶ್ಯಕವಾಗಿರುವ ಶಾಶ್ವತ ಕುಡಿಯುವ ನೀರಿನ ದೊಡ್ಡ ಮಟ್ಟದ ಯೋಜನೆ ಸುಮಾರು 17 ಕೋಟಿ ವೆಚ್ಚದ ವೆಂಟೆಡ್ ಡ್ಯಾಂ ಕಾಮಗಾರಿ ನಡೆಯುತ್ತಿದೆ. ಇದರಿಂದ ಸುಳ್ಯ ನಗರಕ್ಕೆ ಮತ್ತು ಆಲೆಟ್ಟಿ ಪರಿಸರದ ಜನತೆಗೆ ಸದುಪಯೋಗವಾಗಲಿ ಎಂದು ಹೇಳಿದರು.

ವೇದಿಕೆಯಲ್ಲಿ ಆಲೆಟ್ಟಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಪುಷ್ಪಾವತಿ ಕುಡೆಕಲ್ಲು, ಸುಳ್ಯ ನಗರ ಪಂಚಾಯತ್ ಅಧ್ಯಕ್ಷ ವಿನಯ ಕುಮಾರ್ ಕಂದಡ್ಕ, ಆಲೆಟ್ಟಿ ಸೊಸೈಟಿ ಅದ್ಯಕ್ಷ ಕರುಣಾಕರ ಹಾಸ್ಪಾರೆ, ಆಲೆಟ್ಟಿ ಸದಾಶಿವ ದೇವಸ್ಥಾನದ ಅದ್ಯಕ್ಷ ತೀರ್ಥಕುಮಾರ್ ಕುಂಚಡ್ಕ, ಎ.ಪಿ.ಎಂ.ಸಿ. ಮಾಜಿ ನಿರ್ದೇಶಕ ಜಯಪ್ರಕಾಶ್ ಕುಂಚಡ್ಕ, ಆಲೆಟ್ಟಿ ಪಂಚಾಯತ್ ಸದಸ್ಯರಾದ ಮುತ್ತಪ್ಪ ಪೂಜಾರಿ ಮೊರಂಗಲ್ಲು, ಕಮಲ ನಾಗಪಟ್ಟಣ, ಮೀನಾಕ್ಷಿ ಕುಡೆಕಲ್ಲು, ಆಲೆಟ್ಟಿ ಸೊಸೈಟಿ ನಿರ್ದೇಶಕ ತಂಗವೇಲು ನಾಗಪಟ್ಟಣ, ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಸುಧಾಮ ಆಲೆಟ್ಟಿ, ಕೆ.ವಿ.ಹೇಮನಾಥ ಕುರುಂಜಿ, ರಾಧಾಕೃಷ್ಣ ಕೋಲ್ಚಾರು, ವಿಜಯ ಕುಮಾರಿ ಯವರು ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಮಹಿಮಾ ಇಲೆಕ್ಟ್ರಿಕಲ್ಸ್ ಮಾಲಕ ಸುಬ್ರಹ್ಮಣ್ಯ ಭಟ್ ದಂಪತಿಯನ್ನು ಹಾಗೂಗಾಯಕಿ ಕು.ಶುಭದಾ ಆರ್.ಪ್ರಕಾಶ್ ರವರನ್ನು ಸಮಿತಿಯ ವತಿಯಿಂದ ಅಭಿನಂದಿಸಲಾಯಿತು.


ವ್ಯ.ಸ.ಸದಸ್ಯರಾದ ಕೆ.ವಿ.ಹೇಮನಾಥ ಸ್ವಾಗತಿಸಿದರು. ಸುಧಾಮ ಆಲೆಟ್ಟಿ ಪ್ರಾಸ್ತಾವಿಕ ಮಾತನಾಡಿದರು. ರಾಧಾಕೃಷ್ಣ ಕೋಲ್ಚಾರು ವಂದಿಸಿದರು. ಎ.ಕೆ.ಮೋಹನ ಅರಂಬೂರು ಕಾರ್ಯಕ್ರಮ ನಿರೂಪಿಸಿದರು.

ಸಮಿತಿಯ ಪದಾಧಿಕಾರಿಗಳು ಹಾಗೂ ಸದಸ್ಯರು ಸಹಕರಿಸಿದರು. ಸಭಾ ಕಾರ್ಯಕ್ರಮದ ಬಳಿಕ ಸ್ಥಳೀಯ ಕಲಾವಿದರಿಂದ ಸಾಂಸ್ಕೃತಿಕ ಕಾರ್ಯಕ್ರಮ ಮತ್ತು ಗಾಯಕಿ ಕು.ಶುಭದ ಆರ್ .ಪ್ರಕಾಶ್ ರವರಿಂದ ಕರಾವೋಕೆ ಗಾಯನ ಕಾರ್ಯಕ್ರಮ ನಡೆಯಿತು. ಸ್ಥಳೀಯ ಭಕ್ತಾದಿಗಳು ನೂರಾರು ಸಂಖ್ಯೆಯಲ್ಲಿ ಆಗಮಿಸಿದ್ದರು.