ಸೋಣಂಗೇರಿ ಬೇಲ್ಯ ಮನೆಯಲ್ಲಿ ದೈವಗಳ ನೇಮೋತ್ಸವ

0


ಸೋಣಂಗೇರಿ ಬೇಲ್ಯ ಮನೆಯಲ್ಲಿ ಶ್ರೀ ಪಾಷಾಣಮೂರ್ತಿ, ಶ್ರೀ ಕೊರತ್ತಿ ದೈವ, ಮಯ್ಯೋಂತಿ ಮತ್ತು ಧರ್ಮದೈವ ಕುಪ್ಪೆಪಂಜುರ್ಲಿ ದೈವಗಳ ನೇಮೋತ್ಸವ ಮಾ.14 ಮತ್ತು 15ರಂದು ನಡೆಯಿತು.


ಮಾ.14ರಂದು ಸಂಜೆ ಶ್ರೀ ದೈವಗಳ ಭಂಡಾರ ತೆಗೆದು, ಬಳಿಕ ಪಾಷಾಣಮೂರ್ತಿ ದೈವದ ನೇಮೋತ್ಸವ, ಕೊರತ್ತಿ ದೈವದ ನೇಮ, ಮಯ್ಯೋಂತಿ ದೈವದ ನೇಮ ನಡೆಯಿತು.. ಮಾ.15ರಂದು ಬೆಳಿಗ್ಗೆ ಧರ್ಮದೈವ ಕುಪ್ಪೆಪಂಜುರ್ಲಿ ದೈವದ ನೇಮೋತ್ಸವ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಿತು. ಕುಟುಂಬದ ಯಜಮಾನರಾದ ನರಸಿಂಗ ಪರವ ಮತ್ತು ಮಕ್ಕಳು ಹಾಗೂ ಬಂಧು ಮಿತ್ರರು, ಊರವರು ಉಪಸ್ಥಿತರಿದ್ದರು.