ಕುಂಚಡ್ಕ ಭೋಜಪ್ಪ ಗೌಡ ರವರಿಗೆ ಸಾರ್ವಜನಿಕ ಶ್ರದ್ಧಾಂಜಲಿ

0

ಆಲೆಟ್ಟಿ ಗ್ರಾಮದ ಕುಂಚಡ್ಕ ಮನೆತನದ ಹಿರಿಯರಾದ ಭೋಜಪ್ಪ ಗೌಡ ರವರು ಅಲ್ಪ ಕಾಲದ ಅಸೌಖ್ಯದಿಂದ ಮಾ.7 ರಂದು ತನ್ನ ಸ್ವಗೃಹದಲ್ಲಿ ನಿಧನರಾಗಿದ್ದು ಅವರ ಉತ್ತರ ಕ್ರಿಯಾಧಿ ಸದ್ಗತಿ ಹಾಗೂ ಸಾರ್ವಜನಿಕ ಶ್ರದ್ಧಾಂಜಲಿ ಕಾರ್ಯಕ್ರಮವು ಕುಂಚಡ್ಕ ಮನೆಯಲ್ಲಿ ಮಾ.19 ರಂದು ನಡೆಯಿತು.
ಕುಂಚಡ್ಕ ಕುಟುಂಬದ ಹಿರಿಯರಾದ ನಿವೃತ್ತ ಮುಖ್ಯ ಶಿಕ್ಷಕ ಕೊರಗಪ್ಪ ಮಾಸ್ತರ್ ಕುಂಚಡ್ಕ ಹಾಗೂ ನ.ಪಂ.ಮಾಜಿ ಅಧ್ಯಕ್ಷ ಎನ್.ಎ.ರಾಮಚಂದ್ರ ರವರು ನುಡಿ ನಮನ ಸಲ್ಲಿಸಿದರು.
ಈ ಸಂದರ್ಭದಲ್ಲಿ ಮೃತರ ಪತ್ನಿ, ಮಕ್ಕಳು, ಅಳಿಯಂದಿರು,ಸೊಸೆಯಂದಿರು, ಮೊಮ್ಮಕ್ಕಳು ಹಾಗೂ ಕುಟುಂಬಸ್ಥರು ಉಪಸ್ಥಿತರಿದ್ದರು. ಆಗಮಿಸಿದ ಎಲ್ಲಾ ಬಂಧು ಮಿತ್ರರು ಮೃತರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು.