ಉಮಿಕ್ಕಳ ಲಕ್ಷ್ಮಣ ಶೆಟ್ಟಿಯವರ ಪ್ರಥಮಾಬ್ದಿಕ ಪುಣ್ಯಸ್ಮರಣೆ ಕಾರ್ಯಕ್ರಮ

0

ಬೆಳ್ಳಾರೆ ಗ್ರಾಮದ ಉಮಿಕ್ಕಳ ಲಕ್ಷ್ಮಣ ಶೆಟ್ಟಿಯವರ ಪ್ರಥಮಾಬ್ದಿಕ ಪುಣ್ಯಸ್ಮರಣೆ ಕಾರ್ಯಕ್ರಮವು ಮಾ.19 ರಂದು ಬೆಳ್ಳಾರೆ ಅಜಪಿಲ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಸಭಾಭವನದಲ್ಲಿ ನಡೆಯಿತು.
ಬೆಳಿಗ್ಗೆ ರಕ್ತೇಶ್ವರಿ ಭಜನಾ ಮಂಡಳಿ ಕೊಳಂಬಳ ಇವರಿಂದ ಭಜನಾ ಕಾರ್ಯಕ್ರಮ ನಡೆಯಿತು.

ಗ್ರಾಮ ಪಂಚಾಯತ್ ಸದಸ್ಯ ಅನಿಲ್ ರೈ ಚಾವಡಿಬಾಗಿಲುರವರು ನುಡಿನಮನ ಸಲ್ಲಿಸಿದರು.
ಆಗಮಿಸಿದ ಹಲವು ಜನ ಗಣ್ಯರು ದಿ.ಲಕ್ಷ್ಮಣ ಶೆಟ್ಟಿ ಉಮಿಕ್ಕಳರವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು.
ಈ ಸಂದರ್ಭದಲ್ಲಿ ಲಕ್ಷ್ಮಣ ಶೆಟ್ಟಿಯವರ ಪತ್ನಿ ಶ್ರೀಮತಿ ಪ್ರೇಮಲೀಲಾ, ಪುತ್ರ ಗೋವರ್ಧನ ,ಪುತ್ರಿಯರಾದ ಶ್ರೀಮತಿ ರುಕ್ಮಿಣಿ, ಶ್ರೀಮತಿ ಪಾರ್ವತಿ, ಸೊಸೆಯಂದಿರು,ಅಳಿಯಂದಿರು,ಮೊಮ್ಮಕ್ಕಳು ಹಾಗೂ ಕುಟುಂಬಸ್ಥರು ,ಬಂಧು ಮಿತ್ರರು ಉಪಸ್ಥಿತರಿದ್ದರು.