ದುಗ್ಗಲಡ್ಕ ಶ್ರೀ ದುಗ್ಗಲಾಯ ವಾರ್ಷಿಕ ನೇಮೋತ್ಸವ

0

ದೈವಗಳಿಗೆ ತಂಬಿಲ ಮತ್ತು ಸತ್ಯನಾರಾಯಣ ಪೂಜೆ

ದುಗ್ಗಲಡ್ಕ ಶ್ರೀ ದುಗ್ಗಲಾಯ ವಾರ್ಷಿಕ ನೇಮೋತ್ಸವ ದುಗ್ಗಲಡ್ಕದ ಶ್ರೀ ದೈವಸ್ಥಾನದ ಪ್ರತಿಷ್ಠಾ ವಾರ್ಷಿಕೋತ್ಸವ ಮತ್ತು ನೇಮೋತ್ಸವ ಇಂದು ಮತ್ತು ನಾಳೆ ನಡೆಯಲಿದ್ದು, ಆ ಪ್ರಯುಕ್ತ ಇಂದು ಬೆಳಿಗ್ಗೆ ದೈವಗಳಿಗೆ ತಂಬಿಲ, ಶ್ರೀ ಸತ್ಯನಾರಾಯಣ ದೇವರ ಪೂಜೆ,ಪ್ರಸಾದ ವಿತರಣೆ ಮತ್ತು ಅನ್ನ ಸಂತರ್ಪಣೆ ನಡೆಯಿತು.

ಇಂದು ಸಂಜೆ ರುಧಿರ ಚಾಮುಂಡಿ ದೈವದ ನೇಮ, ಧಾರ್ಮಿಕ ಸಭೆ, ನಾಳೆ ಬೆಳಿಗ್ಗೆ ಶ್ರೀ ದುಗ್ಗಲಾಯ ದೈವದ ನೇಮೋತ್ಸವ ನಡೆಯಲಿದೆ.