ಉಬರಡ್ಕ ಸಹಕಾರಿ ಸಂಘದ ನೂತನ ಕಟ್ಟಡ ‘ಸಿರಿ ಸಹಕಾರ ಸೌಧ’ ಲೋಕಾರ್ಪಣೆ

0

ಮಾಜಿ ಸಚಿವರು, ಶಾಸಕರು ಸಹಿತ ಗಣ್ಯರ ಉಪಸ್ಥಿತಿ

ಉವರಡ್ಕ ಮಿತ್ತೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನೂತನ ಕಟ್ಟಡ ಸಿರಿ ಸಹಕಾರ ಸೌಧ ಲೋಕಾರ್ಪಣೆ ಇಂದು ನಡೆಯಿತು.

ಸಹಕಾರ ಸಂಘದ ಅಧ್ಯಕ್ಷ ಎಂ.ದಾಮೋದರ ಗೌಡರ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮ ನಡೆಯಿತು.

ಶಾಸಕಿ ಭಾಗೀರಥಿ ಮುರುಳ್ಯ ಸಿರಿ ಸಹಕಾರ ಸೌಧ ಲೋಕಾರ್ಪಣೆಗೊಳಿಸಿದರು.

ಮಾಜಿ ಸಚಿವ ಎಸ್.ಅಂಗಾರ ಭದ್ರತಾ ಕೊಠಡಿ ಉದ್ಘಾಟಿಸಿದರು.

ಎಂ.ಎಸ್. ಸಿ. ಯೋಜನೆಯಡಿ ನಿರ್ಮಾಣಗೊಂಡ ಗೋದಾಮು ಕಟ್ಟಡವನ್ನು ಡಿಸಿಸಿ ಬ್ಯಾಂಕ್ ‌ನಿರ್ದೇಶಕ ಶಶಿಕುಮಾರ್ ರೈ ಬಾಲ್ಯೊಟ್ಟು ಉದ್ಘಾಟಿಸಿದರು.

ಸಭಾಭವನವನ್ನು ದ.ಕ. ಜಿಲ್ಲಾ ಸಹಕಾರಿ ಸಂಘದ ನಿರ್ದೇಶಕರಾದ ಎಸ್.ಎನ್ ಮನ್ಮಥ ಉದ್ಘಾಟಿಸಿದರು.

ಮುಖ್ಯ ಅತಿಥಿಗಳಾಗಿ ಉಬರಡ್ಕ ಮಿತ್ತೂರು ಗ್ರಾ.ಪಂ ಅಧ್ಯಕ್ಷೆ ಶ್ರೀಮತಿ ಪೂರ್ಣಿಮಾ ಸೂಂತೋಡು, ಸುಳ್ಯ ಟಿ.ಎ.ಪಿ.ಸಿ.ಎಂ.ಎಸ್ ನ ಅಧ್ಯಕ್ಷ ನಿತ್ಯಾನಂದ ಮುಂಡೋಡಿ,
ದ.ಕ ಜೇನು ವ್ಯವಸಾಯಗಾರರ ಸಹಕಾರಿ ಸಂಘ ನಿ. ಪುತ್ತೂರು ಇದರ ಅಧ್ಯಕ್ಷ ಚಂದ್ರಾ ಕೋಲ್ಚಾರ್, ತಾಲೂಕು ಸಹಕಾರಿ ಯೂನಿಯನ್ ಅಧ್ಯಕ್ಷ ರಮೇಶ್ ದೇಲಂಪಾಡಿ, ಸಹಕಾರ ಸಂಘಗಳ ಸಹಾಯಕ ನಿಬಂಧಕರಾದ ಶ್ರೀಮತಿ ತ್ರಿವೇಣಿ ರಾವ್, ಮಿತ್ತೂರು ಜೋಡುದೈವಗಳ ಆಡಳಿತ ಮೊಕ್ತೇಸರರಾದ ವೆಂಕಟ್ರಮಣ ಕೆದಂಬಾಡಿ, ಉಬರಡ್ಕ ಮಿತ್ತೂರು ಶ್ರೀ ನರಸಿಂಹ ಶಾಸ್ತಾವು ದೇವಾಲಯದ ನಿಕಟಪೂರ್ವ ಅಧ್ಯಕ್ಷರಾದ ರತ್ನಾಕರ ಗೌಡ ಬಳ್ಳಡ್ಕ ಭಾಗವಹಿಸಿದ್ದರು.

ಸಂಘದ ನಿರ್ದೇಶಕರುಗಳಾದ ಗಂಗಾಧರ್ ಪಿ.ಎಸ್., ಭಾಸ್ಕರ ರಾವ್ ಯು.ವಿ., ಸುರೇಶ್ ಎಂ.ಹೆಚ್.,ಜಗದೀಶ್ ಕಕ್ಕೆಬೆಟ್ಟು, ಹರಿಪ್ರಸಾದ್ ಪಾನತ್ತಿಲ, ವಿಜಯಕುಮಾರ್ ಉಬರಡ್ಕ, ಈಶ್ವರ ಆರ್ ಕಲ್ಚಾರು, ಹರೀಶ್ ಮಾಣಿಬೆಟ್ಟು, ಶ್ರೀಮತಿ ಶಾರದಾ ಡಿ ಶೆಟ್ಟಿ, ಶ್ರೀಮತಿ ಲೀಲಾವತಿ ಬಿ, ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಪ್ರತಿನಿಧಿ ಬಾಲಕೃಷ್ಣ ಪಿ ಇದ್ದರು.

ಸಂಘದ ಉಪಾಧ್ಯಕ್ಷ ರಾಜೇಶ್ ಭಟ್ ನೆಕ್ಕಿಲ ಸ್ವಾಗತಿಸಿದರು. ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಯಪ್ರಕಾಶ್ ಉರುಂಡೆ ಪ್ರಾಸ್ತಾವಿಕ ಮಾತನಾಡಿದರು. ಉಪನ್ಯಾಸಕಿ ಕು. ಬೇಬಿ ವಿದ್ಯಾ ಕಾರ್ಯಕ್ರಮ ನಿರೂಪಿಸಿದರು.

ಸಂಜೆ ಸಾಂಸ್ಕೃತಿಕ ವೈಭವ, ಸ್ಕಂದ ಮೆಲೋಡಿಸ್ ಮಂಗಳೂರು ಇವರಿಂದ ಸಂಗೀತ ರಸಮಂಜರಿ, ನಂತರ ರಾತ್ರಿ 7.00 ಗಂಟೆಗೆ ಚಾ ಪರ್ಕ ಕಲಾವಿದರಿಂದ ಕಾಪಿಕಾಡ್, ಬೋಳಾರ್, ವಾಮಂಜೂರು ಆಭಿನಯದ ‘ನಾಯಿದ ಬೀಲ’ ನಾಟಕ ನಡೆಯಲಿದೆ.