*ಸುಳ್ಯ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಗಣಿತ ಅಧ್ಯಯನ ಕೇಂದ್ರ ಉದ್ಘಾಟನೆ, ‘ಸಂಖ್ಯಾ ಸಾಮರಸ್ಯ’ ಗಣಿತ ಯಕ್ಷಗಾನ ತಾಳಮದ್ದಳೆ

0

ಸುಳ್ಯ ಸರಕಾರಿ ಪದವಿಪೂರ್ವ ಕಾಲೇಜಿನಲ್ಲಿ ಗಣಿತ ಅಧ್ಯಾಪಕರಾಗಿದ್ದ ಜನಾರ್ಧನ ಮಾಸ್ಟರ್ ಅವರ ನೆನಪಿನಲ್ಲಿ ಕಾಲೇಜಿನಲ್ಲಿ ಸ್ಥಾಪಿಸಲಾದ ‘ಜನಾರ್ಧನ ಮಾಸ್ಟರ್ ಗಣಿತ ಅಧ್ಯಯನ ಕೇಂದ್ರದ ಉದ್ಘಾನೆ ಮಾ.22 ರಂದು ನಡೆಯಿತು.

ಪದ್ಮಶ್ರೀ ಪುರಸ್ಕೃತರಾದ ಡಾ‌.ಗಿರೀಶ್ ಭಾರದ್ವಾಜ್ ಅಧ್ಯಯನ ಕೇಂದ್ರವನ್ನು ಉದ್ಘಾಟಿಸಿದರು. ಅಕಾಡೆಮಿ ಆಫ್‌ ಲಿಬರಲ್ ಎಜ್ಯುಕೇಶನ್‌ನ ಅಧ್ಯಕ್ಷ ಡಾ.ಕೆ‌.ವಿ.ಚಿದಾನಂದ‌ ಅಧ್ಯಕ್ಷತೆ ವಹಿಸಿದ್ದರು. ರಾಮಕುಂಜ ಶ್ರೀ ರಾಮಕುಂಜೇಶ್ವರ ಪ್ರೌಢ ಶಾಲೆಯ ಮುಖ್ಯೋಪಾಧ್ಯಾಯ ಸತೀಶ್ ಭಟ್ ವಿಶೇಷ ಗಣಿತ ಉಪನ್ಯಾಸ ನೀಡಿದರು. ಶಿಕ್ಷಣ ಸಂಯೋಜಕಿ ನಳಿನಿ, ಜನಾರ್ಧನ ಮಾಸ್ಟರ್ ಗಣಿತ ಅಧ್ಯಯನ ಕೇಂದ್ರದ ಅಧ್ಯಕ್ಷ ಎಂ.ಬಿ.ಸದಾಶಿವ, ಸಂಚಾಲಕರಾದ ಡಾ.ಎನ್.ಎ.ಜ್ಞಾನೇಶ್, ಕಾರ್ಯದರ್ಶಿ ಪ್ರಕಾಶ್ ಮೂಡಿತ್ತಾಯ ಪಿ., ಜೊತೆ ಕಾರ್ಯದರ್ಶಿ ಪುರುಷೋತ್ತಮ ಎಂ.ಎಸ್, ಕೋಶಾಧಿಕಾರಿ ರಾಮಚಂದ್ರ ಪಿ, ಸಂಯೋಜಕಿ ಪೂರ್ಣಿಮಾ ಮತ್ತಿತರರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಗಣಿತ ಯಕ್ಷಗಾನ ತಾಳಮದ್ದಳೆ:

ಅಧ್ಯಯನ ಕೇಂದ್ರದ ಉದ್ಘಾಟನೆಯ ಅಂಗವಾಗಿ ಗಣಿತ ಹಾಡು, ಗಣಿತ ನೃತ್ಯ, ಗಣಿತ ಮೂಕಾಭಿನಯ, ಗಣಿತ ನಾಟಕ ನಡೆಯಿತು. ಗಣಿತ ಯಕ್ಷಗಾನ ತಾಳಮದ್ದಳೆ ‘ಸಂಖ್ಯಾ ಸಾಮರಸ್ಯ’ ವಿಶೇಷ ಗಮನ ಸೆಳೆಯಿತು. ಹಿಮ್ಮೇಳದಲ್ಲಿ ರಚನಾ ಚಿದ್ಗಲ್, ಲಕ್ಷ್ಮೀಶ, ಶ್ರೀಕುಮಾರ ಸಹಕರಿಸಿದರು. ಮುಮ್ಮೇಳದಲ್ಲಿ ಶರತ್ ಕುಮಾರ್ ನಿಡ್ಲೆ, ಪರಮೇಶ್ವರ ಹೆಗಡೆ ಬಂಟ್ವಾಳ, ವೀಣಾ ಶ್ಯಾನುಭಾಗ್ ಉಜಿರೆ, ಪ್ರಕಾಶ್ ಮೂಡಿತ್ತಾಯ ಭಾಗವಹಿಸಿದರು.ಚಂದ್ರಮತಿ, ಪೂರ್ಣಿಮಾ, ಮಮತಾ ಕಾರ್ಯಕ್ರಮ ನಿರೂಪಿಸಿದರು.

ಗಣಿತ ಅಧ್ಯಯನ ಕೇಂದ್ರದ‌ ಉದ್ದೇಶ ಏನು..?ವಿದ್ಯಾರ್ಥಿಗಳಲ್ಲಿ, ಶಿಕ್ಷಕರಲ್ಲಿ, ಪೋಷಕರಲ್ಲಿ ಹಾಗು ಸಾರ್ವಜನಿಕರಲ್ಲಿ ಗಣಿತದಲ್ಲಿ ಆಸಕ್ತಿ, ಕುಶಲತೆ, ಅಧ್ಯಯನಶೀಲತೆ ಇತ್ಯಾದಿಗಳನ್ನು ಬೆಳೆಸಲು ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು. ಪ್ರತಿ ವರ್ಷ ಮಾರ್ಚ್ ತಿಂಗಳಲ್ಲಿ ವಿಶ್ವ ಗಣಿತ ದಿನಾಚರಣೆ, ಡಿಸೆಂಬರ್ ತಿಂಗಳಲ್ಲಿ ಗಣಿತ ದಿನಾಚರಣೆಯ ಅಂಗವಾಗಿ ಜಿಲ್ಲಾ ಮಟ್ಟದ ಮ್ಯಾತ್ಸ್ ಫೆಸ್ಟ್, ವಿದ್ಯಾರ್ಥಿಗಳಿಗೆ ಹಾಗು ಸಾರ್ವಜನಿಕರಿಗೆ ಗಣಿತ ಹಾಗು ಮಾನಸಿಕ ಸಾಮರ್ಥ್ಯ ಬೆಳವಣಿಗೆಯ ತರಬೇತಿ, ಶಿಕ್ಷಕರಿಗೆ ವಿಶೇಷ ಗಣಿತ ಕಾರ್ಯಾಗಾರ ಸಂಘಟಿಸುವುದು, ಗಣಿತ ಇ-ಲೈಬ್ರೆರಿ ಸ್ಥಾಪನೆ, ಕಲಾ ಸಮ್ಮಿಳಿತ ಗಣಿತ ಕಲಿಕೆಯ ಸಂಶೋಧನೆ ನಡೆಸುವುದು ಕೇಂದ್ರದ ಮುಖ್ಯ ಉದ್ದೇಶ.