ಯೇನೆಕಲ್ಲು ಜಾತ್ರೋತ್ಸವ ಆರಂಭ : ದೇವಸ್ಥಾನದಲ್ಲಿ ದೇವರ ಬಲಿ ಉತ್ಸವ

0


ಶ್ರೀ ಶಂಖಪಾಲ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನ, ಶ್ರೀ ಉಳ್ಳಾಕುಲು, ಉಳ್ಳಾಳ್ತಿ, ಬಚ್ಚನಾಯಕ, ದೈವಸ್ಥಾನ ಯೇನೆಕಲ್ಲು ಇದರ ವಾರ್ಷಿಕ ಜಾತ್ರೋತ್ಸವವು ಮಾ. ೨೪ರಂದು ಗೊನೆ ಮುಹೂರ್ತದ ಮೂಲಕ ಆರಂಭಗೊಂಡು ಏ. ೨ರ ತನಕ ವಿಜೃಂಭಣೆಯಿಂದ ಜರಗಲಿದೆ.


ಶ್ರೀ ಶಂಖಪಾಲ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನದಲ್ಲಿ ಮಾ. ೨೭ರಂದು ಬೆಳಿಗ್ಗೆ ಭಜನೆ, ರಾತ್ರಿ ರಂಗಪೂಜೆ, ಶ್ರೀ ಭೂತಬಲಿ ಉತ್ಸವ, ವಸಂತಕಟ್ಟೆ ಪೂಜೆ, ಪ್ರಸಾದ ವಿತರಣೆ ಬಳಿಕ ಅನ್ನಸಂತರ್ಪಣೆ ಜರಗಿತು. ಮಾ. ೨೮ರಂದು ಬೆಳಿಗ್ಗೆ ಮಹಾಗಣಪತಿ ಹೋಮ ನಡೆಯಿತು. ಬಳಿಕ ಶ್ರೀ ದೇವರ ಬಲಿ ಉತ್ಸವ ನಡೆಯುತ್ತಿದ್ದು, ದರ್ಶನ ಬಲಿ, ಬಟ್ಟಲು ಕಾಣಿಕೆ, ಪ್ರಸಾದ ವಿತರಣೆ, ಮಧ್ಯಾಹ್ನ ಮಹಾಪೂಜೆ, ಪ್ರಸಾದ ವಿತರಣೆ ಬಳಿಕ ಅನ್ನಸಂತರ್ಪಣೆ ಜರಗಲಿದೆ.


ಶ್ರೀ ಉಳ್ಳಾಕುಲು, ಉಳ್ಳಾಳ್ತಿ, ಬಚ್ಚನಾಯಕ ದೈವಸ್ಥಾನದಲ್ಲಿ ಮಾ. ೨೯ರಂದು ಸಂಜೆ ೬.೩೦ರಿಂದ ಉಗ್ರಾಣ ತುಂಬಿಸುವುದು, ಮುಹೂರ್ತ ತೋರಣ, ಉಳ್ಳಾಕುಲು ವಗೈರೆ ದೈವಗಳು ನೇಮೋತ್ಸವ ನಡೆಯಲಿದೆ. ಮಾ. ೩೦ರಂದು ರಾತ್ರಿ ೮.೦೦ರಿಂದ ಉಳ್ಳಾಳ್ತಿ ವಗೈರೆ ದೈವಗಳ ನೇಮೋತ್ಸವ ಜರಗಲಿದೆ. ಮಾ. ೩೧ರಂದು ರಾತ್ರಿ ೭.೦೦ ಗಂಟೆಯಿಂದ ಭಂಡಾರ ಬಂದು ಉಡ್ಡೋತ್ತಾರು ಕುಮಾರ ದೈವಗಳ ನೇಮೋತ್ಸವ ನಡೆಯಲಿದೆ. ಏ. ೦೧ರಂದು ಬೆಳಿಗ್ಗೆ ೬.೦೦ರಿಂದ ಶ್ರೀ ಬಚ್ಚನಾಯಕ ದೈವದ ನಂತರ ಕೋಟಿನಾಯಕ ದೈವದ ನೇಮೋತ್ಸವ ನಡೆಯಲಿದೆ. ರಾತ್ರಿ ೮.೦೦ ಗಂಟೆಯಿಂದ ಪ್ರಧಾನಿ ವಗೈರೆ ನೇಮ ನಡೆಯಲಿದೆ. ಬಳಿಕ ಭಂಡಾರ ಹೊರಡಲಿದೆ. ಏ. ೨ರಂದು ರಾತ್ರಿ ೮.೦೦ರಿಂದ ಗುಳಿಗ ದೈವದ ನೇಮೋತ್ಸವ ನಡೆಯಲಿದೆ. ಏ. ೨೦ರಂದು ಮಧ್ಯಾಹ್ನ ಶ್ರೀ ದೇವರ ಪ್ರತಿಷ್ಠಾ ದಿವಸದ ಅಂಗವಾಗಿ ಮಧ್ಯಾಹ್ನ ಮಹಾಪೂಜೆ, ಪ್ರಸಾದ ವಿತರಣೆ ಬಳಿಕ ಅನ್ನಸಂತರ್ಪಣೆ, ರಾತ್ರಿ ೭.೩೦ರಿಂದ ರಂಗಪೂಜೆ, ಪ್ರಸಾದ ವಿತರಣೆ ನಡೆಯಲಿದೆ.