ನಿಡುಬೆ – ಜಬಳೆ ಕಾಂಕ್ರೀಟ್ ರಸ್ತೆ ಉದ್ಘಾಟನೆ

0

ಐವರ್ನಾಡು ಗ್ರಾಮದ ನಿಡುಬೆ ಜಬಳೆ ರಸ್ತೆ ಕಾಂಕ್ರೀಟೀಕರಣಗೊಂಡಿದ್ದು ರಸ್ತೆಯ ಉದ್ಘಾಟನೆಯು ಮಾ.28 ರಂದು ನಡೆಯಿತು.ಹಿರಿಯರಾದ ಕೊರಗಪ್ಪ ಗೌಡ ಪೂಜಾರಿಮನೆ ರಸ್ತೆಯನ್ನು ಉದ್ಘಾಟಿಸಿ ಶುಭಹಾರೈಸಿದರು.

ಈ ಸಂದರ್ಭದಲ್ಲಿ ಐವರ್ನಾಡು ಪ್ರಾ.ಕೃ.ಪ.ಸ.ಸಂಘದ ಅಧ್ಯಕ್ಷ ಎಸ್.ಎನ್.ಮನ್ಮಥ, ಗ್ರಾಮ ಪಂಚಾಯತ್ ಅಧ್ಯಕ್ಷ ಬಾಲಕೃಷ್ಣ ಕೀಲಾಡಿ, ವೆಂಕಪ್ಪ ಗೌಡ ಜೆ.ಟಿ, ಅಚ್ಚುತ ಗೌಡ ಕುದುಂಗು,ಮಹೇಶ ಜಬಳೆ,ವಾಸುದೇವ ನಿಡುಬೆ,ಉಮೇಶ ಮಾಸ್ತರ್ ಪಲ್ಲತ್ತಡ್ಕ, ಶೇಖರ ಮಡ್ತಿಲ,ಸಾತ್ವಿಕ್ ಕುದುಂಗು ಹಾಗೂ ಮತ್ತಿತರರು ಉಪಸ್ಥಿತರಿದ್ದರು.