ಪುತ್ತೂರು ವಿಧಾನ ಸಭಾ ಕ್ಷೇತ್ರಕ್ಕೆ ಆಮ್ ಆದ್ಮಿ ಪಕ್ಷದ ಅಭ್ಯರ್ಥಿಯಾಗಿ ಡಾ. ವಿಶುಕುಮಾರ್ ಬಿ.ಕೆ.

0

ಆಮ್ ಆದ್ಮಿ ಪಕ್ಷವು ವಿಧಾನ ಸಭಾ ಚುನಾವಣಾ ಅಭ್ಯರ್ಥಿಗಳ ಎರಡನೇ ಪಟ್ಟಿ ಬಿಡುಗಡೆ ಗೊಳಿಸಿದ್ದು ಪುತ್ತೂರು ವಿಧಾನ ಸಭಾ ಕ್ಷೇತ್ರದಿಂದ ಪರಿಸರ ಸ್ನೇಹಿ, ಕೃಷಿ ವಿಜ್ಞಾನಿ ಡಾ. ವಿಶುಕುಮಾರ್ ಬಿ.ಕೆ. ಸ್ಪರ್ಧಿಸಲಿದ್ದಾರೆ.

ಮೂಲತಃ ಪಂಜದ ಬೇರ್ಯದವರಾಗಿರುವ ಡಾ. ವಿಶುಕುಮಾರ್ ಅನೇಕ ವರ್ಷಗಳಿಂದ ಮೈಸೂರಿನಲ್ಲಿ ಕೃಷಿ ಸಂಶೋಧನಾ ಸಂಸ್ಥೆ ನಡೆಸುತ್ತಿದ್ದು ಕೆಲವು ವರ್ಷಗಳಿಂದ ಪುತ್ತೂರಿನಲ್ಲಿ ನೆಲೆಸಿದ್ದಾರೆ. ಪ್ರಯೋಗಶೀಲ ಸಂಶೋಧಕರಾಗಿ ಹೆಸರು ಮಾಡಿದ್ದಾರೆ. ಆಮ್ ಆದ್ಮಿ ಪಕ್ಷ ಸೇರಿ ಸಂಘಟನಾ ಕಾರ್ಯಕ್ರಮಗಳಲ್ಲಿ ಭಾಗಿಯಾಗಿದ್ದಾರೆ.