ಪಯಸ್ವಿನಿ ನದಿಯ ನೀರನ್ನು ಮಲೀನಗೊಳಿಸದಿರಿ

0

ಮಂಡೆಕೋಲು ಗ್ರಾ.ಪಂ. ಸದಸ್ಯ ಬಾಲಚಂದ್ರ ದೇವರಗುಂಡ ಮನವಿ

ಮೀನು ಹಿಡಿಯುವವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಜರುಗಿಸಲಾಗುವುದು

ಸುಳ್ಯದ ಜೀವನದಿ ಪಯಸ್ವಿನಿ ನದಿಯಲ್ಲಿ ನೀರಿನ ಹರಿವು ಕಡಿಮೆಯಾಗಿದ್ದು, ಇರುವ ನೀರನ್ನು ನದಿ ಹರಿಯುವ ಗ್ರಾಮ ವ್ಯಾಪ್ತಿಯ ಜನರು ಉಪಯೋಗಿಸುತ್ತಿದ್ದಾರೆ. ಕೆಲ ದಿನಗಳಿಂದ ನದಿಗೆ ತೋಟೆ ಹಾಕಿ ಮೀನು ಹಿಡಿಯುವ ಮಾಹಿತಿ ಬಂದಿದ್ದು ಮೀನು ಹಿಡಿಯುವವರು ಅದನ್ನು ತಕ್ಷಣ ನಿಲ್ಲಿಸಬೇಕು. ಇಲ್ಲವಾದರೆ ಅಂತವರ ವಿರುದ್ಧ ಕಾನೂ‌ನು ಕ್ರಮಕೈಗೊಳ್ಳಲಾಗುವುದು ಎಂದು ಮಂಡೆಕೋಲು ಗ್ರಾಮ ಪಂಚಾಯತ್ ಸದಸ್ಯ ಬಾಲಚಂದ್ರ ದೇವರಗುಂಡ ತಿಳಿಸಿದ್ದಾರೆ.

ನಮಗೆ ಬಂದಿರುವ ಮಾಹಿತಿಯಂತೆ ಪಂಜಿಕಲ್ಲು ವ್ಯಾಪ್ತಿಯಲ್ಲಿ ಮೀನು ಹಿಡಿಯುತ್ತಾರೆ.‌ ಇದರಿಂದ ನದಿಯ ನೀರು ಮಲೀನವಾಗುತ್ತಿದ್ದು ಮೀನು ಹಿಡಿಯುವುದನ್ನು‌ ನಿಲ್ಲಿಸಬೇಕು ಇದು ಹೀಗೆ ಮುಂದುವರಿದರೆ ಗ್ರಾಮ ಪಂಚಾಯತ್ ಹಾಗೂ ಸಂಬಂಧಿಸಿದ ಇಲಾಖೆಗೆ ದೂರು ನೀಡಿ‌ ಕ್ರಮ ಜರುಗಿಸಲಾಗುವುದು. ಊರವರು ಕೂಡಾ ಈ ಕುರಿತು ಜಾಗೃತರಾಗಿ ನದಿಯ ನೀರನ್ನು ಮಲೀನಗೊಳಿಸುವವರ ಮಾಹಿತಿ ನೀಡಬೇಕಾಗಿ ಅವರು ಕೇಳಿಕೊಂಡಿದ್ದಾರೆ