ಕ್ಷೇತ್ರದಲ್ಲಿ ಅಂಗಾರರು ಅಭಿವೃದ್ಧಿ ಕೆಲಸ ಮಾಡಿಲ್ಲ ಸುಳ್ಯದಲ್ಲಿ ಈ ಬಾರಿ ಕಾಂಗ್ರೆಸ್‌ನ್ನು ಜನರು ಗೆಲ್ಲಿಸುತ್ತಾರೆ, ಬ್ಲಾಕ್ ಕಾಂಗ್ರೆಸ್ ಪತ್ರಿಕಾಗೋಷ್ಠಿ

0

ಕಳೆದ ೩೦ ವರ್ಷಗಳಿಂದ ಶಾಸಕರಾಗಿರುವ ಎಸ್‌ಅಂಗಾರರು ಕ್ಷೇತ್ರದಲ್ಲಿ ಅಭಿವೃದ್ಧಿ ಕೆಲಸವನ್ನು ಮಾಡಿಲ್ಲ. ಆದ್ದರಿಂದ ಈ ಬಾರಿ ಸುಳ್ಯ ಕ್ಷೇತ್ರದಲ್ಲಿ ಜನರು ಕಾಂಗ್ರೆಸ್ ಅಭ್ಯರ್ಥಿಯನ್ನು ಗೆಲ್ಲಿಸಲಿದ್ದಾರೆ ಎಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಿ.ಸಿ. ಜಯರಾಮರು ಹೇಳಿದ್ದಾರೆ.

ಎ.೧ರಂದು ಸುಳ್ಯ ಸದರ್ನ್ ರೆಸಿಡೆನ್ಸಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಅವರು, ರಾಜ್ಯ ಬಿಜೆಪಿ ಸರಕಾರದ ಆಡಳಿತ ವಿರೋಧಿ ಅಲೆ ಸುಳ್ಯ ಕ್ಷೇತ್ರದಲ್ಲಿಯೂ ಜನಜನಿತವಾಗಿದೆ. ಆದ್ದರಿಂದ ಈ ಬಾರಿ ಕಾಂಗ್ರೆಸ್ ಅಧಿಕಾರಕ್ಕೆ ಬರುವುದು ಗ್ಯಾರಂಟಿ. ಕಾಂಗ್ರೆಸ್ ಪಕ್ಷ ಈಗಾಗಲೇ ನೀಡಲಾದ ಗ್ಯಾರಂಟಿಗಳಾದ ೨೦೦ ಯುನಿಟ್ ಉಚಿತ ವಿದ್ಯುತ್, ಮನೆ ಯಜಮಾನಿಗೆ ಪ್ರತಿ ತಿಂಗಳು ೨೦೦೦ ನಗದು, ಬಿಪಿಎಲ್ ದಾರರಿಗೆ ೧೦ ಕೆ.ಜಿ. ಅಕ್ಕಿ, ನಿರುದ್ಯೋಗ ಯುವಕ/ಯುವತಿಯವರಿಗೆ ೨ ವರ್ಷ ೩೦೦೦ ಹಾಗೂ ಡಿಪ್ಲೋಮದಾರರಿಗೆ ರೂ.೧೫೦೦ ಗೌರವ ಧನ ಇತ್ಯಾದಿ ಯೋಜನೆಗಳನ್ನು ಹಾಗೂ ಭ್ರಷ್ಟ ರಾಜ್ಯ ಹಾಗೂ ಕೇಂದ್ರ ಬಿಜೆಪಿ ಸರಕಾದ ವೈಫಲ್ಯಗಳನ್ನು ಮನೆ ಮನೆಗೆ ತಲುಪಿಸಿ ಕಾಂಗ್ರೆಸ್ ಅಭ್ಯರ್ಥಿಯ ಗೆಲುವಿಗೆ ಪಣ ತೊಡಬೇಕಾಗಿದೆ ಎಂದು ಹೇಳಿದರು.

ದ.ಕ.ಜಿಲ್ಲಾ ಚುನಾವಣಾ ಪ್ರಚಾರ ಸಮಿತಿ ಅಧ್ಯಕ್ಷ ಭರತ್ ಮುಂಡೋಡಿ ಮಾತನಾಡಿ ಶಾಸಕ ಅಂಗಾರರು ಅಭಿವೃದ್ಧಿ ಕೆಲಸ ಮಾಡಿಲ್ಲ ಎಂದು ಎಲ್ಲ ಕಡೆ ಜನರು ಹೇಳುತ್ತಿದ್ದಾರೆ. ಚುನಾವಣಾ ಬಹಿಷ್ಕಾರದ ಬ್ಯಾನರ್‌ಗಳನ್ನು ಹಾಕಿದ್ದಾರೆ. ಅದರರ್ಥ ಜನರು ತೀಋಆ ಅತೃಪ್ತರಾಗಿದ್ದಾರೆ. ಆದ್ದರಿಂದ ಈ ಬಾರಿ ಕಾಂಗ್ರೆಸ್ ಅಭ್ಯರ್ಥಿ ಗೆಲುವು ಗ್ಯಾರಂಟಿ ಎಂದು ಹೇಳಿದರು.

ಪತ್ರಿಕಾಗೋಷ್ಠೀಯಲ್ಲಿ ಡಿಸಿಸಿ ಉಪಾಧ್ಯಕ್ಷ ಎನ್.ಜಯಪ್ರಕಾಶ್ ರೈ, ಬ್ಲಾಕ್ ಪ್ರಧಾನ ಕಾರ್ಯದರ್ಶಿ ಪಿ.ಎಸ್.ಗಂಗಾಧರ್, ಪ್ರಚಾರ ಸಮಿತಿ ಅಧ್ಯಕ್ಷ ಸದಾನಂದ ಮಾವಜಿ, ನಾಯಕರಾದ ಡಾ| ರಘು ಬೆಳ್ಳಿಪ್ಪಾಡಿ, ಕೆ.ಎಂ.ಮುಸ್ತಫಾ, ಇಸ್ಮಾಯಿಲ್ ಪಡ್ಪಿನಂಗಡಿ, ಹಮೀದ್ ಕುತ್ತಮೊಟ್ಟೆ, ಎಸ್.ಸಂಶುದ್ದೀನ್, ಟಿ.ಎಂ.ಶಹೀದ್, ಶಾಫಿ ಕುತ್ತಮೊಟ್ಟೆ, ಚಂದ್ರ ಲಿಂಗಂ, ಸುರೇಶ್ ಎಂ.ಹೆಚ್., ಮಹಿಳಾ ಘಟಕದ ಅಧ್ಯಕ್ಷೆ ಗೀತಾ ಕೋಲ್ಚಾರ್, ಗಂಗಾಧರ ಮೇನಾಲ, ಜಯಪ್ರಕಾಶ್ ನೆಕ್ರೆಪ್ಪಾಡಿ ಇದ್ದರು.