ಸುಳ್ಯ ಕೊರಂಬಡ್ಕ ಶ್ರೀ ಮೊಗೇರ್ಕಳ ದೈವಗಳ ನೇಮೋತ್ಸವ – ಕೊರಗಜ್ಜ ದೈವದ ನೇಮ

0

ಸುಳ್ಯ ಜಯನಗರ ಕೊರಂಬಡ್ಕದ ಶ್ರೀ ನಾಗಬ್ರಹ್ಮ ಆದಿ ಮೊಗೇರ್ಕಳ ದೈವಸ್ಥಾನ ಶ್ರೀ ಗುಳಿಗ ದೈವ, ಸ್ವಾಮಿ ಕೊರಗಜ್ಜ ದೈವಸ್ಥಾನದಲ್ಲಿ ಕಾಲಾವಧಿ ಶ್ರೀ ಮೊಗೇರ್ಕಳ ದೈವಗಳ ನೇಮೋತ್ಸವವು ಎ.1 ಮತ್ತು ಎ.2ರಂದು ಶ್ರೀ ನಾಗಬ್ರಹ್ಮ ಆದಿ ಮೊಗೇರ್ಕಳ ದೈವಸ್ಥಾನದ ಸನ್ನಿಧಿಯಲ್ಲಿ ನಡೆಯಿತು.

ಎ.1ರಂದು ಬೆಳಗ್ಗೆ ಗಣಪತಿ ಹವನ, ಸಂಜೆ ಶ್ರೀ ಗುಳಿಗ ದೈವದ ನೇಮ ಹಾಗೂ ಹರಕೆಯ ಗುಳಿಗ ದೈವದ ನೇಮ, ಪ್ರಸಾದ ವಿತರಣೆ, ದೀಪಾರಾಧನೆ, ಬಳಿಕ ಶ್ರೀ ನಾಗಬ್ರಹ್ಮ ದೇವರಿಗೆ ಮಹಾಪೂಜೆ,ಸಾರ್ವಜನಿಕ ಅನ್ನಸಂತರ್ಪಣೆಯು ನಡೆಯಿತು.

ರಾತ್ರಿ ಶ್ರೀ ಮೊಗೇರ್ಕಳ ದೈವಗಳು ಗರಡಿ ಇಳಿದು, ಸತ್ಯ ದೇವತೆ ಶ್ರೀ ತನ್ನಿ ಮಾಣಿಗ ದೈವದ ನೇಮ, ಬಳಿಕ ಪಾತ್ರಿಗಳ ದರ್ಶನ ನಡೆಯಿತು.
ಎ.2ರಂದು ಬೆಳಗ್ಗೆ ಪ್ರಸಾದ ವಿತರಣೆ, ಬಳಿಕ ಸ್ವಾಮಿ ಕೊರಗಜ್ಜ ದೈವದ ನೇಮ ಮತ್ತು ಹರಕೆಯ ಕೋಲ ನಡೆಯುತ್ತಿದೆ.

ಊರ ಹಾಗೂ ಪರವೂರ ಭಕ್ತಾದಿಗಳು ಉಪಸ್ಥಿತರಿದ್ದು ದೈವದ ಗಂಧ ಪ್ರಸಾದ ಸ್ವೀಕರಿಸಿದರು.