ಎಣ್ಮೂರು: ಚುನಾವಣೆ ಬಹಿಷ್ಕಾರ ಬ್ಯಾನರ್ ಪ್ರತ್ಯಕ್ಷ – ಗ್ರಾ.ಪಂ.ನಿಂದ ತೆರವು

0

ಎಡಮಂಗಲ ಪಂಚಾಯತ್ ವ್ಯಾಪ್ತಿಯ ಎಣ್ಮೂರು ಭಜನಾ ಮಂದಿರ ರಸ್ತೆಯಲ್ಲಿ ಮತದಾನದ ಬಹಿಷ್ಕಾರ ಬ್ಯಾನರ್‌ವೊಂದು ಕಂಡಬಂದಿದ್ದು ಮಧ್ಯಾಹ್ನದ ವೇಳೆಗೆ ಎಡಮಂಗಲ ಗ್ರಾ.ಪಂ.ನವರು ಬ್ಯಾನರ್ ತೆರವುಗೊಳಿಸಿದ ಘಟನೆ ಎ.1ರಂದು ನಡೆದಿದೆ.


” ನಮಗೆ ಚಿಕ್ಕ ಕೆಲಸವಾಗಬೇಕಾದರು ಸುಮಾರು 7 ಕೀ.ಮಿ. ದೂರದಲ್ಲಿರುವ ಎಡಮಂಗಲ ಗ್ರಾ.ಪಂ. ಕಾರ್ಯಾಲಯಕ್ಕೆ ಹೋಗಬೇಕಾಗಿದೆ. ನಮಗೆ ಎಣ್ಮೂರು ಗ್ರಾ.ಪಂ. ಕಾರ್ಯಾಲಯವನ್ನು ಪುನಃ ಎಣ್ಮೂರಿಗೆ ತರಬೇಕು. ಇಲ್ಲವಾದಲ್ಲಿ ನಮ್ಮಲ್ಲಿ ಮತ ಕೇಳಲು ಬರಬೇಡಿ.”
ಎಂಬ ಬ್ಯಾನರ್‌ವೊಂದು ಎ.1ರಂದು ಎಣ್ಮೂರು ಭಜನಾ ಮಂದಿರದ ಬಳಿಯಲ್ಲಿ ಪ್ರತ್ಯಕ್ಷಗೊಂಡಿತ್ತು. ಮಧ್ಯಾಹ್ನದ ವೇಳೆಗೆ ಎಡಮಂಗಲ ಗ್ರಾ.ಪಂ.ನವರು ಬ್ಯಾನರ್ ತೆರವುಗೊಳಿಸಿದರು.