ಅರಂತೋಡು : ವಿನ್ ಫ್ಯಾಷನ್ ಬಟ್ಟೆ ಅಂಗಡಿ ಶುಭಾರಂಭ

0


ಅರಂತೋಡಿನ ಕುತ್ತಮೊಟ್ಟೆ ಗೋಪಾಲಕೃಷ್ಣ ಕಾಂಪ್ಲೆಕ್ಸ್ ನಲ್ಲಿ ನೂತನವಾಗಿ ಪ್ರಾರಂಭವಾದ ವಿನ್ ಫ್ಯಾಷನ್ ಬಟ್ಟೆ ಅಂಗಡಿಯ ಉದ್ಘಾಟನೆಯನ್ನು ಅರಂತೋಡು ನೆಹರು ಸ್ಮಾರಕ ಪದವಿ ಪೂರ್ವ ಕಾಲೇಜು ನಿವೃತ್ತ ಪ್ರಾಂಶುಪಾಲ ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಶಿಕ್ಷಕ ಕೆ.ಆರ್ ಗಂಗಾಧರ ದ್ವೀಪ ಬೆಳಗಿಸಿ ಉದ್ಘಾಟಿಸಿದರು .

ಕಾರ್ಯಕ್ರಮದಲ್ಲಿ ಅತಿಥಿಯಾಗಿ ಭಾಗವಹಿಸಿದ ತೆಕ್ಕಿಲ್ ಪ್ರತಿಷ್ಟಾನದ ಸ್ಥಾಪಕಧ್ಯಕ್ಷರಾದ ಟಿ ಎಂ ಶಾಹಿದ್ ತೆಕ್ಕಿಲ್ ಮಾತನಾಡಿ ಅರಂತೋಡು ಶರವೇಗದಲ್ಲಿ ಬೆಳೆಯುತ್ತಿದ್ದು ಹಲವಾರು ವರ್ಷಗಳ ಇತಿಹಾಸ ಇರುವ ಸ್ಥಳ ಇನ್ನೂ ಕೂಡ ಹೆಚ್ಚು ಅಭಿವೃದ್ಧಿಯಾಗಲಿ ಎಂದು ಹಳೆಯ ಕಟ್ಟಡವನ್ನು ಕೆಡವಿ ಸುಂದರ ಕಟ್ಟಡ ನಿರ್ಮಿಸಿದ ಕಟ್ಟಡದ ಮಾಲಕಿ ಶಾರದಾ ಕುತ್ತಮೊಟ್ಟೆ ಅವರನ್ನು ಮತ್ತು ವಿನ್ ಫ್ಯಾಷನ್ ಮಾಲಕರಾದ ಕೃಷ್ಣಕುಮಾರ್ ದಂಪತಿಗಳಿಗೆ ನೂತನ ವ್ಯಾಪಾರ ಯಶಸ್ವಿ ಆಗಲಿ ಎಂದು ಹಾರೈಸಿದರು.

ಶ್ರೀಮತಿ ಶಾರದಾ ಕುತ್ತಮೊಟ್ಟೆ,ಅರಂತೋಡು ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಸಂತೋಷ್ ಕುತ್ತಮೊಟ್ಟೆ,ರಾಜೇಶ್ ಮೇನಾಲ, ಆರ್ ಸುಕುಮಾರನ್,ಶಂಕರಲಿಂಗಂ, ಚಂಗಪ್ಪ ಕಲ್ಲುಗದ್ದೆ ಅತಿಥಿಗಳಾಗಿ ಭಾಗವಹಿಸಿದರು.ಅತಿಥಿಗಳನ್ನು ಅಂಗಡಿ ಮಾಲಕರು ಬರಮಾಡಿಕೊಂಡರು.