ಪಂಜದಲ್ಲಿ ವಿವಿಧ ಭಜನಾ ತಂಡಗಳಿಂದ ನಗರ ಭಜನೆ

0

ಪಂಜ ಶಾರದಾಂಬಾ ಭಜನಾ ಮಂಡಳಿ ವತಿಯಿಂದ ಎ.15 ರಿಂದ ಎ.21 ರ ತನಕ ಉಚಿತ ಭಜನಾ ತರಬೇತಿ ಶಿಬಿರ ನಡೆಯಲಿದೆ.
ಇದರ ಪೂರ್ವಭಾವಿಯಾಗಿ ಎ.14 ರಂದು ವಿವಿಧ ಭಜನಾ ತಂಡಗಳಿಂದ ನಗರ ಭಜನೆ ನಡೆದು ಪಂಜ ಪೇಟೆಯಲ್ಲಿ ಸಂಗಮ ಗೊಂಡು ಶ್ರೀ ಶಾರದಾಂಬಾ ಭಜನಾ ಮಂದಿರದಲ್ಲಿ ಭಜನೆಯ ಮಂಗಳ ನಡೆಯಿತು.


ಪಲ್ಲೋಡಿ ಉಳ್ಳಾಕುಲು ಕಲಾರಂಗದ
ಭಜನಾ ತಂಡ ಪಲ್ಲೋಡಿ ಯಿಂದ, ಶ್ರೀ ವಿಷ್ಣು ಭಜನಾ ಮಂಡಳಿ ಅಳ್ಪೆ ಮತ್ತು ಪಂಬೆತ್ತಾಡಿ ಪಂಚಶ್ರೀ ಭಜನಾ ಮಂಡಳಿ ನಿಡ್ವಾಳ ಶ್ರೀ ಮಹಾವಿಷ್ಣು ದೇವಳದಿಂದ, ಕೂತ್ಕುಂಜ ಶಂಕರನಾರಾಯಣ ದೇವಸ್ಥಾನದ ಭಜನಾ ತಂಡ ಮತ್ತು ನಾಗತೀರ್ಥ ಶ್ರೀ ಪಂಚಲಿಂಗೇಶ್ವರ
ಭಜನಾ ಮಂಡಳಿ ಪಂಜ ಶ್ರೀ ಪರಿವಾರ ಪಂಚಲಿಂಗೇಶ್ವರ ದೇವಸ್ಥಾನದಿಂದ, ಶ್ರೀ ಶಾರದಾಂಬಾ ಭಜನಾ ಮಂಡಳಿ ಪೈಂದೋಡಿ ಸುಬ್ರಾಯ ದೇವಸ್ಥಾನದಿಂದ ನಗರ
ಭಜನೆ ಆರಂಭಿಸಿ ಎಲ್ಲಾ ಭಜನಾ ತಂಡಗಳು ಪಂಜದಲ್ಲಿ ಸಂಗಮ ಗೊಂಡು ಶ್ರೀ ಶಾರದಾಂಬಾ ಭಜನಾ ಮಂದಿರದಲ್ಲಿ ಮಂಗಳ ಭಜನೆ ನಡೆಯಿತು.