ದೇವಚಳ್ಳ : ಕುಡಿಯುವ ನೀರಿನ‌ ಅಭಾವ – ಅನ್ಯ ಉದ್ದೇಶಕ್ಕೆ ಕುಡಿಯುವ ನೀರನ್ನು ಬಳಸಿದರೆ ಬೀಳುತ್ತೆ ದಂಡ – ಸಂಪರ್ಕವೂ ಕಡಿತ

0

ದೇವಚಳ್ಳ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಕುಡಿಯುವ ನೀರನ್ನು ಅನ್ಯ ಉದ್ದೇಶಕ್ಕೆ ಬಳಸಿದರೆ ಪಂಚಾಯತ್ ಕಡೆಯಿಂದ‌ ದಂಡ ವಿಧಿಸಲಿದ್ದಾರೆ.‌ಅಲ್ಲದೇ ಸಂಪರ್ಕವನ್ನು ಕಡಿತ‌ ಮಾಡಲಿದ್ದಾರೆ.‌

ವಿವಿಧ ಜನ ವಸತಿ ಪ್ರದೇಶ ಗಳಲ್ಲಿ ಕುಡಿಯುವ ನೀರು ಪೂರೈಸುವ ಕುಡಿಯುವ ನೀರಿನ ಸ್ಥಾವರದ ಕೊಳವೆಬಾವಿಗಳಲ್ಲಿ ನೀರಿನ ಪ್ರಮಾಣ ಕಡಿಮೆಯಾಗಿದ್ದು, ಕುಡಿಯುವ ನೀರಿನ ಬೇಡಿಕೆ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಪಂಚಾಯತ್ ನಳ್ಳಿ ನೀರು ಸಂಪರ್ಕ ಪಡೆದು ಕೊಂಡಿರುವ ಸಾರ್ವಜನಿಕರು ನೀರನ್ನು ಅನ್ಯ ಉದ್ದೇಶಕ್ಕೆ ಬಳಸದೇ ಅಂದರೆ ವಾಹನ ವನ್ನು ತೊಳೆಯಲು, ಕೃಷಿ ಗೆ, ಗಿಡಗಳಿಗೆ ನೀರನ್ನು ಬಿಡುವುದು ಅಥವಾ ಅನ್ಯತಾ ವ್ಯರ್ಥ ಮಾಡುವುದು ಕಂಡು ಬಂದರೆ ಅಂತಹವರ ನೀರಿನ ಸಂಪರ್ಕ ವನ್ನು ಯಾವುದೇ ಮುನ್ಸೂಚನೆ ನೀಡದೆ ಕಡಿತ ಗೊಳಿಸಿ ದಂಡ ವಿಧಿಸಲಾಗುವುದು ಎಂದು ಪಂಚಾಯತ್ ಅಭಿವೃದ್ಧಿ ಅಧಿಕಾರಿಯವರು ತಮ್ಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.