ಸುಳ್ಯದಲ್ಲಿ ಶ್ರೀ ಗುರು ರಾಯರ ಪಲ್ಲಕ್ಕಿ ಉತ್ಸವ -ಆಕರ್ಷಕ ಪಟ್ಟಣ ಸವಾರಿ

0

ಮೆರವಣಿಗೆಯಲ್ಲಿ ಆಕರ್ಷಕ ಕುಣಿತ ಭಜನೆ, ಸಿಂಗಾರಿಮೇಳ- ಭಜನಾ ಸಂಕೀರ್ತನೆ

ಸುಳ್ಯ ಶ್ರೀ ಗುರು ರಾಘವೇಂದ್ರ ಮಠದ 5 ನೇ ವರ್ಷದ ಪ್ರತಿಷ್ಠಾ ವಾರ್ಷಿಕ ಮಹೋತ್ಸವದ ಪ್ರಯುಕ್ತ ವಿಶೇಷವಾಗಿ ಎ.21 ರಂದು ರಾಯರ ಪಲ್ಲಕ್ಕಿ ಉತ್ಸವ ಪಟ್ಟಣ ಸವಾರಿಯು ಸುಳ್ಯದ ಪ್ರಮುಖ ರಸ್ತೆಯಲ್ಲಿ ವಿಜೃಂಭಣೆಯಿಂದ ಜರುಗಿತು.


ಬೆಳಗ್ಗೆ ಅರ್ಚಕರ ನೇತೃತ್ವದಲ್ಲಿ ಮಠದಲ್ಲಿ ಗಣಪತಿ ಹವನ ನಡೆದು ಸಂಜೆ ವಿಶೇಷವಾಗಿ ಆಕರ್ಷಕ ಕುಣಿತ ಭಜನೆ,ಸಿಂಗಾರಿ ಮೇಳ, ವಾದ್ಯ ಘೋಷ ಹಾಗೂ ಭಜನಾ ತಂಡಗಳ ಭಜನಾ ಸಂಕೀರ್ತನೆಯೊಂದಿಗೆ
ಶ್ರೀ ಗುರು ರಾಯರ ಪಟ್ಟಣ ಸವಾರಿಯು ಪಲ್ಲಕ್ಕಿಯಲ್ಲಿ ಸುಳ್ಯ ‌ನಗರದ ಪ್ರಮುಖ ಬೀದಿಯಲ್ಲಿ ಸಾಗಿ ಬಂತು.


ರಾಘವೇಂದ್ರ ಮಠದಿಂದ ಹೊರಟ ಸವಾರಿಯು ವಿವೇಕಾನಂದ ಸರ್ಕಲ್ ನಿಂದ ತಾಲೂಕು ಮಂಚಾಯತ್ ಎದುರು ಮತ್ತು ಶ್ರೀ ಹರಿ ಕಾಂಪ್ಲೆಕ್ಸ್ ಬಳಿ ,ಸುಳ್ಯ ಖಾಸಗಿ ಬಸ್ ನಿಲ್ದಾಣದಿಂದ ಮುಂದುವರಿದು ಚೆನ್ನಕೇಶವ ದೇವಾಲಯದ ಎದುರು ಕುಣಿತ ಭಜನೆ, ಸಿಂಗಾರಿಮೇಳ ಹಾಗೂ ಪಲ್ಲಕ್ಕಿ ನೃತ್ಯೋತ್ಸವವು ನಡೆಯಿತು. ಸಾವಿರಾರು ಭಕ್ತಾದಿಗಳು ರಾಯರ ಉತ್ಸವವನ್ನು ಕಣ್ತುಂಬಿಕೊಂಡರು.ಬಳಿಕ ಮಠಕ್ಕೆ ಹಿಂತಿರುಗಿದ ಬಳಿಕ ಮಠದಲ್ಲಿ ರಾಯರಿಗೆ ಮಹಾ ಪೂಜೆಯಾಗಿ ಪ್ರಸಾದ ವಿತರಣೆಯಾಗಿ ಸಾರ್ವಜನಿಕ ಅನ್ನ ಸಂತರ್ಪಣೆ ನಡೆಯಿತು. ಮೆರವಣಿಗೆಯಲ್ಲಿ ಸಾಗಿ ಬರುವ ಭಕ್ತಾದಿಗಳಿಗೆ ಪಾನೀಯ ಹಾಗೂ ಉಪಹಾರದ ವ್ಯವಸ್ಥೆ ಮಾಡಲಾಗಿತ್ತು.

ಮಠದ ಅರ್ಚಕ ವೃಂದದವರು ಸಹಕರಿಸಿದರು. ಆಡಳಿತ ಸಮಿತಿಯ ಅಧ್ಯಕ್ಷರು ಹಾಗೂ ಸದಸ್ಯರು ಮತ್ತು ಉಪಸಮಿತಿಯ ಸದಸ್ಯರುಗಳು ಉಪಸ್ಥಿತರಿದ್ದರು.