ಚೂಂತಾರು : ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದ ಬೆಂಕಿ ಅವಘಡ

0

ಬೆಂಕಿ ನಂದಿಸಿದ ಊರವರು ಮತ್ತು ಅಗ್ನಿ ಶಾಮಕ ದಳ

ಅಮರಪಡ್ನೂರು ಗ್ರಾಮದ ಚೂಂತಾರು ಎಂಬಲ್ಲಿ ಇಂದು ಬೆಂಕಿ ಅವಘಡ ಸಂಭವಿಸಿದ ಬಗ್ಗೆ ವರದಿಯಾಗಿದೆ.


ಮಧ್ಯಾಹ್ನ 12.00ಗಂಟೆ ಸುಮಾರಿಗೆ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದ ಬೆಂಕಿ ಕಿಡಿ ಉಂಟಾಗಿ ರಸ್ತೆ ಬೀದಿಯ ತರಗೆಲೆ ಮೇಲೆ ಬಿದ್ದು ರಸ್ತೆ ಬದಿಗೆ ಹಾಗೂ ಹತ್ತಿರದ ಖಾಸಗಿ ಜಮೀನಿಗೆ ವ್ಯಾಪಿಸುವ ಹಂತದಲ್ಲಿತ್ತು, ವಿಷಯ ತಿಳಿದ ಸ್ಥಳೀಯ ನಾಗರಿಕರು ಸೇರಿ ಬೆಂಕಿ ವ್ಯಾಪಿಸದಂತೆ ನಿಯಂತ್ರಿಸಲು ಯಶಸ್ವಿಯಾದರು.

ಮಾಹಿತಿ ತಿಳಿದು ತಕ್ಷಣ ಸ್ಪಂದಿಸಿ ಆಗಮಿಸಿದ ಸುಳ್ಯ ಅಗ್ನಿ ಶಾಮಕ ಸಿಬ್ಬಂದಿಗಳು ಕಾರ್ಯ ಪ್ರವೃತರಾಗಿ ಬೆಂಕಿ ಯನ್ನು ಸಂಪೂರ್ಣ ಹತೊಟಿಗೆ ತಂದಿರುತ್ತಾರೆ ಎಂದು ಸ್ಥಳೀಯ ಗ್ರಾಮ ಪಂಚಾಯಿತಿ ಸದಸ್ಯ ಅಶೋಕ್ ಚೂಂತಾರು ಪತ್ರಿಕೆಗೆ ತಿಳಿಸಿದ್ದಾರೆ.