ಕಾರ್ಮಿಕರಿಗೆ ಥಳಿತ: ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್

0

ಸುಳ್ಯದ ಸರಕಾರಿ ಬಸ್ ನಿಲ್ದಾಣದ ಮುಂಭಾಗದಲ್ಲಿ ಇಂದು ಬೆಳಿಗ್ಗೆ ಕೂಲಿ ಕಾರ್ಮಿಕರಿಬ್ಬರನ್ನು ವ್ಯಕ್ತಿಯೋರ್ವರು ಥಳಿಸುತ್ತಿರುವ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ವಿಡಿಯೋದಲ್ಲಿ ಸುಳ್ಯ ಕೆಎಸ್ಆರ್ಟಿಸಿ ಬಸ್ ನಿಲ್ದಾಣ ಮುಂಭಾಗದಲ್ಲಿರುವ ನಂದಿನಿ ಮಿಲ್ಕ್ ಸ್ಟೋರ್ ಬಳಿ ಇಬ್ಬರು ಕಾರ್ಮಿಕರು ಕುಳಿತಿದ್ದು ಓರ್ವ ವ್ಯಕ್ತಿ ಅಲ್ಲೇ ಪಕ್ಕದಲ್ಲಿರುವ ಬ್ಯಾಗ್ ಒಂದನ್ನು ತೋರಿಸಿ ಇದನ್ನು ಓಪನ್ ಮಾಡಿದವರು ಯಾರು ಎಂದು ಕೇಳಿ ಥಳಿಸುತ್ತಿರುವ ದೃಶ್ಯ ಕಂಡುಬರುತ್ತಿದೆ.


ಕೆಲವು ಸಮಯದ ಬಳಿಕ ಓರ್ವ ಅಲ್ಲಿಂದ ತಪ್ಪಿಸಿದ್ದು ಮತ್ತೋರ್ವ ವ್ಯಕ್ತಿಯನ್ನು ಥಳಿಸುತ್ತಿದ್ದ ವ್ಯಕ್ತಿ ಅಲ್ಲೇ ಕುಳ್ಳಿರಿಸಿ ತಮ್ಮ ಮೊಬೈಲ್ ಮೂಲಕ ಯಾರಿಗೋ ಮಾಹಿತಿ ನೀಡುವ ರೀತಿಯಲ್ಲಿ ಕಂಡು ಬರುತ್ತಿದೆ. ಘಟನೆಯ ಬಗ್ಗೆ ಹೆಚ್ಚಿನ ವಿವರ ಇನ್ನೂ ತಿಳಿದುಬಂದಿಲ್ಲ.

ಈ ಘಟನೆಯ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಕಾರ್ಮಿಕರ ಮೇಲೆ ವ್ಯಕ್ತಿಯೊಬ್ಬ ಅನಗತ್ಯವಾಗಿ ಹಲ್ಲೆ ಮಾಡಿದ್ದಾನೆ
ಕೂಲಿ ಕೆಲಸಕ್ಕಾಗಿ ದೂರ ಊರಿಂದ ಬಂದಿರುವ ಕಾರ್ಮಿಕರಿಗೆ ಈ ರೀತಿಯಾಗಿ ಹಲ್ಲೆ ಮಾಡಿದರುವುದು ಖಂಡನಿಯ.
ಹಲ್ಲೆ ಮಾಡಿದ ವ್ಯಕ್ತಿಯ ಮೇಲೆ ಕಾನೂನು ಕ್ರಮ ಕೈಗೊಂಡು
ಕೂಲಿ ಕಾರ್ಮಿಕರಿಗೆ ಸೂಕ್ತ ರಕ್ಷಣೆ ನೀಡಲು ಈ ಮೂಲಕ ವಿನಂತಿ ಎಂದೂ ಹರಿದಾಡುತ್ತಿದೆ.