ಅಜ್ಜಾವರದಲ್ಲಿ ಅಮ್ ಅದ್ಮಿ ಪಕ್ಷದ ಬಿರುಸಿನ ಪ್ರಚಾರ

0

ಸುಳ್ಯ ವಿಧಾನಸಭಾ ಕ್ಷೇತ್ರದ ಅಮ್ ಅದ್ಮಿ ಪಕ್ಷದ ಅಭ್ಯರ್ಥಿ ಸುಮನ ಬೆಳ್ಳರ್ಕಾರ್ ಪರವಾಗಿ ಅಜ್ಜಾವರ, ಅಡ್ಕ,ಅಡ್ಪಂಗಾಯ,ಬಾಗದಲ್ಲಿ ಪಕ್ಷದ ಪರ ಬಿರುಸಿನ ಪ್ರಚಾರ ನಡೆಯಿತು.


ಮನೆ ಮನೆ ತೆರಳಿ ಮತಯಾಚನೆ ನಡೆಸಿದ ಕಾರ್ಯಕರ್ತರು ಅಮ್ ಅದ್ಮಿ‌ ಪಕ್ಷವನ್ನು ಬೆಂಬಲಿಸಲು ಮನವಿ ಮಾಡಿಕೊಂಡರು.


ಭ್ರಷ್ಟಾಚಾರ ರಹಿತ ಆಡಳಿತದೊಂದಿಗೆ ಬಡವರ ಪರ ಕಾಳಜಿ ಇರುವ ಪಕ್ಷವನ್ನು ಬೆಂಬಲಿಸಿ ಎಂದು ಪ್ರಚಾರಪಡಿಸಿದರು.
ಅಜ್ಜಾವರ ಭಾಗದಲ್ಲಿ ವಿವಿಧ ಸಾಮಾಜಿಕ ಕಳಕಳಿಯ ಯುವಕರ ಪಕ್ಷಕ್ಕೆ ಸೇರ್ಪಡೆಯಾದರು.