ವಿಧಾನಸಭಾ ಚುನಾವಣೆ : ಮೇ.2 ರಿಂದ ಮೇ.4 ವರೆಗೆ ಅಂಚೆ ಮತದಾನಕ್ಕೆ ಅವಕಾಶ

0

ಕರ್ನಾಟಕ ಸಾರ್ವತ್ರಿಕ ವಿಧಾನಸಭೆ ಚುನಾವಣೆ 2023
207-ಸುಳ್ಯ ವಿಧಾನಸಭಾ ಕ್ಷೇತ್ರಕ್ಕೆ ಒಳಪಟ್ಟಂತೆ ಅಗತ್ಯ ಸೇವೆಗಳ ಮೇಲಿರುವ ಗೈರು ಹಾಜರಿ ಮತದಾರರು ಅಂಚೆ ಮತಪತ್ರದ ಮುಖಾಂತರ ಮತದಾನ ಮಾಡುವುದಕ್ಕೆ ಸಂಬಂಧಿಸಿ ತಾವು ನಮೂನೆ 12 ಡಿ ಯನ್ನು ಸಲ್ಲಿಸಿದ್ದು, ಮತದಾನ ಮಾಡುವುದಕ್ಕೆ ಮೇ. 02 ರಿಂದ ಮೇ.04ರ ವರೆಗೆ ಸುಳ್ಯ ತಾಲೂಕು ಕಛೇರಿಯಲ್ಲಿ ಪೂ. 9.00 ರಿಂದ ಅಪರಾಹ್ನ 5.00 ರ ವರೆಗೆ ಅವಕಾಶ ಕಲ್ಪಿಸಲಾಗಿದೆ. ಆದುದರಿಂದ ಈ ದಿನಾಂಕಗಳಲ್ಲಿ ತಾವು ಸುಳ್ಯ ತಾಲೂಕು ಕಛೇರಿಯಲ್ಲಿ ತೆರೆಯಲಾಗುವ ಮತಗಟ್ಟೆಗೆ ಬಂದು ಮತದಾನ ಮಾಡಬಹುದು ಎಂದು‌ ಚುನಾವಣಾಧಿಕಾರಿಗಳು ತಿಳಿಸಿದ್ದಾರೆ.