ನಾಳೆ (ಎ.30) ಸುಳ್ಯಕ್ಕೆ ‌ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ‌ಜೆ.ಬಿ. ನಡ್ಡಾ ಆಗಮನ

0

ಚೆನ್ನಕೇಶವ ದೇವಸ್ಥಾನದ ಮುಂಭಾಗ ಸಭೆ : 8 ರಿಂದ 10 ಸಾವಿರ ಮಂದಿ ಕಾರ್ಯಕರ್ತರು ಭಾಗಿ

ಬಿಜೆಪಿ ರಾಷ್ಟ್ರೀಯ ‌ಅಧ್ಯಕ್ಷ ಜೆ.ಪಿ. ನಡ್ಡಾರವರು ಎ.30 ರಂದು ಸುಳ್ಯಕ್ಕೆ ಆಗಮಿಸಲಿದ್ದು, ಬಿಜೆಪಿ ಅಭ್ಯರ್ಥಿ ಭಾಗೀರಥಿ ಮುರುಳ್ಯ ಪರ ಚುನಾವಣಾ ಪ್ರಚಾರ ಸಭೆಯಲ್ಲಿ ‌ಭಾಗವಹಿಸಲಿದ್ದಾರೆ ಎಂದು‌ ಬಿಜೆಪಿ ಮಂಡಲ ಸಮಿತಿ ಅಧ್ಯಕ್ಷ ಹರೀಶ್‌ಕಂಜಿಪಿಲಿ ಹೇಳಿದರು.

ಇಂದು ಸುಳ್ಯ ಪ್ರೆಸ್ ಕ್ಲಬ್ ನಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಅವರು, “ನಾಳೆ 4 ಗಂಟೆಗೆ ಹೆಲಿಕಾಪ್ಟರ್ ಮೂಲಕ ಸುಳ್ಯದ ಕೊಡಿಯಾಲಬೈಲು ಎಂಜಿಎಂ ಶಾಲಾ ಮೈದಾನಕ್ಕೆ ಆಗಮಿಸಲಿದ್ದಾರೆ. ಅಲ್ಲಿಂದ ಕಾರಿನಲ್ಲಿ ಪ್ರವೀಣ್ ನೆಟ್ಟಾರು ಮನೆಗೆ ಭೇಟಿ ನೀಡಲಿದ್ದು, 4.30 ಕ್ಕೆ ಸುಳ್ಯ ಚೆನ್ನಕೇಶವ ದೇವಸ್ಥಾನದ ಮುಂಭಾಗದ ಸಭೆಯಲ್ಲಿ ಅವರು ಭಾಗವಹಿಸಲಿದ್ದಾರೆ.8 ರಿಂದ 10 ಸಾವಿರ ಮಂದಿ ಕಾರ್ಯಕರ್ತರು ಭಾಗವಹಿಸಲಿದ್ದಾರೆ ಎಂದು ಅವರು ವಿವರ ನೀಡಿದರು.

ಈಗಾಗಲೇ ಸುಳ್ಯದಲ್ಲಿ ಅಭ್ಯರ್ಥಿ ಭಾಗೀರಥಿ ‌ಮುರುಳ್ಯ ಪರ 241 ಬೂತ್ ಗಳಲ್ಲಿಯೂ ಮನೆ ಭೇಟಿ ಕಾರ್ಯಕ್ರಮ ಆಗಿದೆ. ಎಲ್ಲ ಕಡೆಯೂ ಬಿಜೆಪಿ ಯತ್ತ ಒಲವು ಇದೆ. 35 ಸಾವಿರ ಅಂತರದ ಗೆಲುವು ಈ ಭಾರಿ ಸುಳ್ಯ‌ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಗೆಲ್ಲುತ್ತಾರೆ. 2 ಹಂತದಲ್ಲಿ ಮನೆ ಭೇಟಿ ನಡೆಯಲಿದ್ದು ರಾಜ್ಯ ಮತ್ತು ಕೇಂದ್ರ ಸರಕಾರದ ಸಾಧನೆಗಳನ್ನು ಮನೆ ಮನೆಗೆ ತಿಳಿಸಲಾಗುವುದು ಎಂದು ಹೇಳಿದರು.
ಎ.5 ರಂದು ಸುಳ್ಯಕ್ಕೆ ತಮಿಳು ನಾಡು ಬಿಜೆಪಿ ರಾಜ್ಯಾಧ್ಯಕ್ಷ ಅಣ್ಣಾಮಲೈ‌ ಬೇಟಿ ನೀಡಿ ಪ್ರಚಾರ ನಡೆಸಲಿದ್ದಾರೆ ಎಂದು ಹೇಳಿದರು.

ಬಿಜೆಪಿ ಪ್ರಮುಖಕರಾದ ಎಸ್.ಎನ್. ಮನ್ಮಥ, ಜಯಪ್ರಕಾಶ್ ಕುಂಚಡ್ಕ, ಹರೀಶ್ ಬೂಡುಪನ್ನೆ, ಅಶೋಕ್ ಅಡ್ಕಾರ್, ಪ್ರಸಾದ್ ಕಾಟೂರು ಇದ್ದರು.