ಮೇ.2-5: ಕಾನಡ್ಕ ಕುಟುಂಬದ ತರವಾಡು ದೈವಸ್ಥಾನದಲ್ಲಿ ಪ್ರತಿಷ್ಠಾ ಕಲಶೋತ್ಸವ ಹಾಗೂ ಶ್ರೀ ದೈವಗಳ ನೇಮನಡಾವಳಿ

0

ಅಮರಮುಡ್ನೂರು ಗ್ರಾಮದ ಕಾನಡ್ಕ ಕುಟುಂಬದ ತರವಾಡು ಧರ್ಮದೈವ ಶ್ರೀ ರುದ್ರ ಚಾಮುಂಡಿ ಮತ್ತು ಪರಿವಾರ ದೈವಗಳ ದೈವಸ್ಥಾನದಲ್ಲಿ ಪ್ರತಿಷ್ಠಾ ಕಲಶೋತ್ಸವ ಹಾಗೂ ಶ್ರೀ ದೈವಗಳ ಧರ್ಮ ನಡಾವಳಿಯು ಮೇ.2 ರಿಂದ 5 ರ ತನಕ‌ ನಡೆಯಲಿರುವುದು.


ಕೆಮ್ಮಿಂಜೆ ಬ್ರಹ್ಮಶ್ರೀ ವೇದಮೂರ್ತಿ ಸುಬ್ರಹ್ಮಣ್ಯ ಬಳ್ಳಕ್ಕುರಾಯರ ನೇತೃತ್ವದಲ್ಲಿ ಧಾರ್ಮಿಕ ಕಾರ್ಯಕ್ರಮಗಳು‌ ನಡೆಯಲಿದೆ.
ಮೇ.2 ರಂದು ಸಾಯಂಕಾಲ ತಂತ್ರಿಗಳ ಆಗಮನವಾಗಿ ಆಲಯ ಪರಿಗ್ರಹ ,ಪ್ರಾರ್ಥನೆ ಸ್ಥಳ ಶುದ್ಧಿ,ಪ್ರಾಸಾದ ಶುದ್ಧಿ, ರಕ್ಷೋಘ್ನ ಹೋಮ, ವಾಸ್ತು ಹೋಮ, ವಾಸ್ತು ಬಲಿ,ದಿಕ್ವಾಲ ಬಲಿ,ಬಿಂಬ ಶುದ್ಧಿ ಯಾಗಿ ರಾತ್ರಿ ಅನ್ನ ಸಂತರ್ಪಣೆ ನಡೆಯಲಿದೆ. ಮೇ.3 ರಂದು ಪೂರ್ವಾಹ್ನ ಗಣಪತಿ ಹವನವಾಗಿ ಕಲಶಾರಾಧನೆಯಾಗಿ ಪೂರ್ವಾಹ್ನ ಗಂಟೆ 10.13 ರ ಶುಭ ಮುಹೂರ್ತದಲ್ಲಿ ಧರ್ಮ ದೈವ ಶ್ರೀ ರುದ್ರ ಚಾಮುಂಡಿ ಮತ್ತು ಪರಿವಾರ ದೈವಗಳ ಪ್ರತಿಷ್ಠೆ ಕಲಶಾಭಿಷೇಕವಾಗಿ ತಂಬಿಲ ಸೇವೆ ನಡೆದು ಮಧ್ಯಾಹ್ನ ಮಹಾಪೂಜೆಯಾಗಿ ಪ್ರಸಾದ ವಿತರಣೆಯಾಗಿ ಸಾರ್ವಜನಿಕ ಅನ್ನ ಸಂತರ್ಪಣೆ ನಡೆಯಲಿದೆ.


ಮೇ.4 ರಂದು ರಾತ್ರಿ ಗಂಟೆ 7.00 ಕ್ಕೆ ಶ್ರೀ ದೈವಗಳ ಭಂಡಾರ ತೆಗೆಯುವುದು. ಬಳಿಕ ಕುಲಜ್ಯಾವತೆ ಮತ್ತು ಕಲ್ಲುರ್ಟಿ ದೈವಗಳ ನೇಮ ನಡೆದು ಶ್ರೀ ವರ್ಣಾರ ಪಂಜುರ್ಲಿ ಕುಪ್ಪೆ ಪಂಜುರ್ಲಿ ದೈವಗಳ ನೇಮೋತ್ಸವ ನಡೆಯಲಿದೆ. ಆಗಮಿಸಿದ ಭಕ್ತಾದಿಗಳಿಗೆ ರಾತ್ರಿ ಅನ್ನ ಸಂತರ್ಪಣೆ ಯಾಗಲಿರುವುದು. ಮರುದಿನ ಪ್ರಾತ ಕಾಲ ಗಂಟೆ 6.00 ರಿಂದ ಶ್ರೀ ರುದ್ರ ಚಾಮುಂಡಿ ದೈವದ ನೇಮ ನಡಾವಳಿಯು ನಡೆದು ಮಧ್ಯಾಹ್ನ ಶ್ರೀ ಗುಳಿಗ ದೈವ ಮತ್ತು ಅಂಗಾರ ಬಾಕುಡ ದೈವಗಳ ನೇಮವು ನಡೆಯಲಿದೆ. ಆಗಮಿಸಿದ ಭಕ್ತಾದಿಗಳಿಗೆ ಪ್ರಸಾದ ವಿತರಣೆಯಾಗಿ
ಮಧ್ಯಾಹ್ನ ಅನ್ನ ಸಂತರ್ಪಣೆ ಯಾಗಲಿರುವುದು‌.