ಶ್ರೀ ಸಂಪುಟ ನರಸಿಂಹ ಸ್ವಾಮಿ ಶ್ರೀ ಸುಬ್ರಹ್ಮಣ್ಯ ಮಠದಲ್ಲಿ ಶ್ರೀ ನರಸಿಂಹ ಜಯಂತೀ ಮಹೋತ್ಸವ ಆರಂಭ “ಶಾಸ್ತ್ರಗಳಲ್ಲಿ ಸರ್ಪಮೀಮಾಂಸಾ” ವಿಚಾರ ಸಂಕಿರಣ* *ಸರ್ಪನ ಅನುಗ್ರಹ ಸೂರ್ಯನಿಂದ, ನೀರಿನಿಂದಲೂ ಸಿಗಬಹುದು, ಸರ್ಪಾಧಾರನೆ ಪ್ರಾಮುಖ್ಯ: ವಿದ್ಯಾಪ್ರಸನ್ನ ಶ್ರೀಗಳು*

0

ಸರ್ಪನ ಅನುಗ್ರಹ ಸೂರ್ಯನಿಂದ, ನೀರಿನಿಂದಲೂ ಸಿಗಬಹುದು, ಸರ್ಪಾಧಾರನೆ ಪ್ರಾಮುಖ್ಯ ಎಂದು ಶ್ರೀ ಸಂಪುಟ ನರಸಿಂಹ ಸ್ವಾಮಿ ಶ್ರೀ ಸುಬ್ರಹ್ಮಣ್ಯ ಮಠದ ವಿದ್ಯಾಪ್ರಸನ್ನ ಶ್ರೀಗಳು ನುಡಿದರು.

.ಶ್ರೀ ಸಂಪುಟ ನರಸಿಂಹ ಸ್ವಾಮಿ ಶ್ರೀ ಸುಬ್ರಹ್ಮಣ್ಯ ಮಠ ಇದರಶ್ರೀ ನರಸಿಂಹ ಜಯಂತೀ ಮಹೋತ್ಸವದ ಕಾರ್ಯಕ್ರಮದ “ಶಾಸ್ತ್ರಗಳಲ್ಲಿ ಸರ್ಪಮೀಮಾಂಸಾ” ವಿಚಾರ ಸಂಕಿರಣ ಅಧ್ಯಕ್ಷತೆಯನ್ನು ವಹಿಸಿ ಮಾತನಾಡುತಿದ್ದರು.ಪರಶುರಾಮನ ಸೃಷ್ಠಿಯಲ್ಲಿ ಮನುಷ್ಯನಿಗೆ, ಇತರೇ ಜೀವಿಗಳಿಗೆ ಜೀವಿಸುವ ವ್ಯವಸ್ಥೆ ಕಲ್ಲಿಸಿದೆ. ವಿಷ್ಣುವಿನ ಆರಾಧನೆಯೊಂದಿಗೆ ಸರ್ಪರಾಧನೆಯು ಬಹು ಮುಖ್ಯ. ಸರ್ಪನ ಅನುಗ್ರಹ ಸೂರ್ಯನಿಂದಲೂ ಸಿಗಲೂ ಬಹುದು, ನೀರಿನಿಂದಲೂ ಸಿಗಬಹುದು. ಹೀಗೆ ಹಲವು ವಿಧದಲ್ಲಿ ಸರ್ಪಾರಾಧನೆಯಿದೆ ಆದ್ದರಿಂದ ಸರ್ಪಧಾರನೆ ಪ್ರಾಮುಖ್ಯವಾಗುತ್ತದೆ. ಈ ಭಾರಿಯ ನರಸಿಂಹ ಜಯಂತೀ ಕಾರ್ಯಾಕ್ರಮದ ಆರಂಭದ ಕಾರ್ಯಕ್ರಮ ಅಧ್ಬುತವಾಗಿ ಮೂಡಿಬಂತು ಮುಂದಿನ ದಿನಗಳಲ್ಲೂ ಹೀಗೆ ಮೂಡಿ ಬರಲಿ ಎಂದು ಹಾರೈಸಿದರು.

ಗೋಷ್ಠಿಯ ಅಧ್ಯಕ್ಷತೆ ಯನ್ನು ಪ್ರೊ.ವೀರನಾರಾಯಣ ಪಾಂಡುರಂಗಿ ವಹಿಸಿದ್ದರು. ಮಹಾಭಾರತದಲ್ಲಿ ಸರ್ಪಮೀಮಾಂಸಾ ವಿಷಯದ ಬಗ್ಗೆ ಉಪನ್ಯಾಸವನ್ನು ಡಾ.ಷಣ್ಮುಖ ಹೆಬ್ಬಾರ್ ನೀಡಿದರು.ಡಾ.ಬಿ.ಗೋಪಾಲಾಚಾರ್ ದಾಸಸಾಹಿತ್ಯದಲ್ಲಿ ಸರ್ಪಮೀಮಾಂಸಾ ದ ಬಗ್ಗೆ ಉಪನ್ಯಾಸ ನೀಡಿದರೆವಿದ್ವಾನ್ ಮಹೇಂದ್ರ ಸೋಮಾಯಾಜಿ ಪುರಾಣಗಳಲ್ಲಿ ಸರ್ಪಮೀಮಾಂಸಾ ದ ಬಗ್ಗೆ ಉಪನ್ಯಾಸ ನೀಡಿದರು.

ಶ್ರೀಕರ ಕುಲಕರ್ಣಿ ಕಾರ್ಯಕ್ರಮ ನಿರ್ವಹಿಸಿದರು.ನರಸಿಂದ ಜಯಂತೀಕಾರ್ಯಕ್ರಮದ ಅಂಗವಾಗಿಶ್ರೀಮದಾನಂದತೀರ್ಥ ತತ್ತ್ವದರ್ಶಿನೀ ಸಭಾ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುತಿದ್ದು ಮೇ.೨ ರಿಂದ ಮೇ.೬ ರವರೆಗೆ ನಡೆಯಲಿದೆ.

ಮೇ.೨ ಬೆಳಗ್ಗೆ ವಸಂತ ದ್ವಾದಶಿ, ಶ್ರೀ ವೇದವ್ಯಾಸ ಜಯಂತೀ, ವಸಂತ ಪೂಜೆ ನಡೆಯಿತು.ಬಳಿಕ ಶ್ರೀ ಅನಿರುದ್ಧ ತೀರ್ಥ ವೇದಿಕೆಯಲ್ಲಿನಾಡಿನ ವಿವಿಧ ತಂಡಗಳಿಂದ ಭಜನೆ ನಡೆಯಿತು. ರಾತ್ರಿ ವಿದುಷಿ ಕು.ಶ್ರೀರಂಜಿನಿಸಂತಾನಗೋಪಾಲನ್, ಚೆನೈ ಕರ್ನಾಟಕ ಶಾಸ್ತ್ರೀಯ ಸಂಗೀತಾ ಕಛೇರಿ ನಡೆಯಿತು.