ದೇಶದಲ್ಲಿ ಶಾಂತಿ‌ ನೆಲೆಸುವ ನಿಟ್ಟಿನಲ್ಲಿ ಕಾಂಗ್ರೆಸ್ ಪ್ರಣಾಳಿಕೆ : ಸರಿಯಾಗಿ ಅರ್ಥೈಸಿಕೊಳ್ಳಿ : ಕಾಂಗ್ರೆಸ್ ಚುನಾವಣಾ ಉಸ್ತುವಾರಿ ಎಂ.ವೆಂಕಪ್ಪ ಗೌಡ

0

ಕಾಂಗ್ರೆಸ್ ಪಕ್ಷ ಹುಟ್ಟಿಕೊಂಡ ದಿನದಿಂದಲೇ ಶಾಂತಿ ಸಹಬಾಳ್ವೆ ಹಾಗು ಎಲ್ಲಾ ಧರ್ಮದವರೊಂದಿಗೆ ಸೌಹಾರ್ದತೆಯನ್ನು ಬೆಳೆಸಿಕೊಂಡು ಬಂದಿರುವ ಇತಿಹಾಸ ಹೊಂದಿ ರುವ ಪಕ್ಷ ,ಹಾಗಾಗಿ ಚುನಾವಣಾ ಸಂದರ್ಭದಲ್ಲಿ ಸಹಜವಾಗಿಯೇ ತನ್ನ ಜಾತ್ಯತೆಯ ಮನೋಭಾವವನ್ನು ಮತ್ತೊಮ್ಮೆ ನೆನೆಪಿಸಿದೆ ಎಂದು‌ ಸುಳ್ಯ ವಿಧಾನಸಭಾ ಕ್ಷೇತ್ರ ಕಾಂಗ್ರೆಸ್ ಚುನಾವಣಾ ಉಸ್ತುವಾರಿ ಎಂ.ವೆಂಕಪ್ಪ‌ ಗೌಡ ಹೇಳಿದ್ದಾರೆ.

ಆ ಹಿನ್ನೆಲೆಯಲ್ಲಿ ಕಾಂಗ್ರೆಸ್ ಪ್ರಣಾಳಿಕೆ ಬಿಡುಗಡೆ ಸಂದರ್ಭ ದೇಶದಲ್ಲಿ ಜಾತಿ ಧರ್ಮಗಳ ಆಧಾರದಲ್ಲಿ ಕೋಮುದಳ್ಳುರಿಗಳು ಉದ್ಭವಿಸಬಾರದಾಗಿ ಮತ್ತು ಈ ದೇಶದಲ್ಲಿ ಶಾಂತಿ ನೆಲೆಸಬೇಕೆಂಬ ಉದ್ದೇಶದಿಂದ ಅಶಾಂತಿ ಸೃಷ್ಠಿಸುವ ಯಾವುದೇ ಧರ್ಮದ ವ್ಯಕ್ತಿಯಾಗಲಿ ಯಾವುದೇ ಸಂಘಟನೆಯಾಗಲಿ ಅಂತಹ ಸಂಘಟನೆಗಳಿಗೆ ಕಡಿವಾಣ ಹಾಕಿ ದೇಶದ ಪ್ರತಿಯೊಬ್ಬ ಪ್ರಜೆನೂ ಪ್ರೀತಿ ವಾತ್ಸಲ್ಯದಿಂದ ಬದುಕಬೇಕು ಎನ್ನುವ ಅರ್ಥದಲ್ಲಿ ಕಾಂಗ್ರೆಸ್ ಬಿಡುಗಡೆ ಮಾಡಿದ ಪ್ರಣಾಳಿಕೆಯನ್ನು ಅರ್ಥೈಯಿಸಿಕೊಳ್ಳಬೇಕೆ ಹೊರತು ಈ ದೇಶದಲ್ಲಿ ಧರ್ಮ ಮತ್ತು ಹಿಂಸೆಯ ಮೂಲಕವೇ ಜನರ ಭಾವನೆಯನ್ನು ಒಡೆದು ಆಳ್ವಿಕೆ ಮಾಡುವ ಜನನಾಯಕರ ಮನಸ್ಥಿಯಂತೆ ಯಾರೂ ಅರ್ಥೈಯಿಸಬಾರದಾಗಿ ಕಾಂಗ್ರೆಸ್ ಭಾವಿಸುತ್ತದೆ .ವಾಸ್ತವವಾಗಿ ನಮ್ಮನ್ನ ಅಳುವ ಸರಕಾರದ ಮುಖ್ಯಸ್ಥರು ಜನ ಶಾಂತಿ ಸಂಯಮದಿಂದ ನೆಲೆಸುವಂತೆ ಮಾಡಬೇಕಾದ ಹೇಳಿಕೆಯನ್ನು ನೀಡದೆ ಇನ್ನಷ್ಟು ಉಗ್ರ ರೀತಿಯಲ್ಲಿ ನೀಡಿ ಉರಿಯುವ ಬೆಂಕಿಗೆ ತುಪ್ಪ ಸುರಿಯುತ್ತಿರೋದು ವಿಷಾದನೀಯ ! ಎಂದು ಅವರು ಹೇಳಿಕೆಯಲ್ಲಿ ತಿಳಿಸಿದ್ದಾರೆ.