ಗುತ್ತಿಗಾರು: ಕೆಂಬಾರೆ ರಸ್ತೆ ಬಳಿ ಚುನಾವಣಾ ಬಹಿಷ್ಕಾರ ಬ್ಯಾನರ್

0

ಗುತ್ತಿಗಾರು ಗ್ರಾಮದ ಕೆಂಬಾರೆ ಸಂಪರ್ಕ ರಸ್ತೆ ಬಳಿ ಚುನಾವಣಾ ಬಹಿಷ್ಕಾರದ ಬ್ಯಾನರ್ ಅಳವಡಿಸಿರುವುದು ಇಂದು ಕಂಡು ಬಂದಿದೆ.
ಕೆಂಬಾರೆ ರಸ್ತೆ ಅಭಿವೃದ್ಧಿಯನ್ನು ಉಲ್ಲೇಖಿಸಿ ಇದನ್ನು ಹಾಕಲಾಗಿದೆ. ಬ್ಯಾನರ್ ನಲ್ಲಿ “ಮಾರ್ಗದ ಕಾಂಕ್ರೀಟಿಕರಣದ ಭರವಸೆ ಹುಸಿಯಾಯಿತೇ…? ಬಹುದಿನದ ಬೇಡಿಕೆ ಈಡೇರುವವರೆಗೆ ಕೆಂಬಾರೆ ನಿವಾಸಿಗಳಿಂದ ಮತದಾನ ಬಹಿಷ್ಕಾರ” ಎಂಬ ಬರಹವನ್ನು ಬರೆಯಲಾಗಿದೆ.