ಅಮರಮುಡ್ನೂರು: ಚಾಮಡ್ಕ – ಉರುಂಬಿ ತಿರುವಿನಲ್ಲಿ ಕಾರು ಬೈಕ್ ಡಿಕ್ಕಿ-ಬೈಕ್ ಸವಾರನಿಗೆ ಗಾಯ

0

ಅಮರಮುಡ್ನೂರಿನ ಕುಕ್ಕುಜಡ್ಕ ಕಡೆಯಿಂದ ಕಲ್ಮಡ್ಕ ಕಡೆಗೆ ಸಂಚರಿಸುತ್ತಿದ್ದ ಸ್ವಿಫ್ಟ್ ಕಾರೊಂದು ಹಾಸನಡ್ಕದಿಂದ ಕುಕ್ಕುಜಡ್ಕಕ್ಕೆ ಬರುತ್ತಿದ್ದ ಬೈಕಿಗೆ ಡಿಕ್ಕಿಯಾದ ಘಟನೆ ಚಾಮಡ್ಕ ಉರುಂಬಿ ಎಂಬ ತಿರುವಿನಲ್ಲಿ ಇಂದು ಸಂಭವಿಸಿದೆ.
ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಹಾಸನಡ್ಕದ ಪ್ರಮೋದ್ ಎಂಬ ಯುವಕನ ಕಾಲಿಗೆ ಗಾಯವಾಗಿದ್ದು ಸುಳ್ಯ ಸರಕಾರಿ ಆಸ್ಪತ್ರೆಗೆ ಸ್ಥಳೀಯರು ಕರೆತಂದು ದಾಖಲಿಸಿರುವುದಾಗಿ ತಿಳಿದು ಬಂದಿದೆ. ಕಾರಿನ ಮುಂಭಾಗಕ್ಕೆ ಮತ್ತು ಬೈಕ್ ಜಖಂಗೊಂಡಿದೆ.