ಕೆ.ವಿ.ಜಿ ಐ.ಟಿ.ಐ ಯ ವಿದ್ಯಾರ್ಥಿಗಳು ಬೆಂಗಳೂರಿನ ನಂದಿ ಟೊಯೋಟಾ ಕಂಪೆನಿಗೆ ಆಯ್ಕೆ

0

ಏಪ್ರಿಲ್ 19ರಂದು ಬೆಂಗಳೂರಿನ ಪ್ರತಿಷ್ಠಿತ ನಂದಿ ಟೊಯೋಟಾ ಕಂಪೆನಿ ಇವರು ಕೆ.ವಿ.ಜಿ ಕೈಗಾರಿಕಾ ತರಬೇತಿ ಸಂಸ್ಥೆಗೆ ಆಗಮಿಸಿ, ದ್ವಿತಿಯ ವರ್ಷದ ಮೆಕಾನಿಕ್ ಮೋಟಾರು ವಾಹನ (ಎಂ.ಎಂ.ವಿ) ವಿದ್ಯಾರ್ಥಿಗಳಿಗೆ ಸಂದರ್ಶನ ನಡೆಸಿದ್ದಾರೆ.
ಈ ಸಂದರ್ಶನದಲ್ಲಿ ನಮ್ಮ ಸಂಸ್ಥೆಯ ರಕ್ಷಣ್ ರೈ ಕೆ., ನೂತನ್ ಪಿ., ದೀಕ್ಷಿತ್ ಕೆ.ಪಿ., ಸಚಿನ್ ಹೆಚ್., ಗಗನ್ ಕೆ. ಪವನ್ ಪಿ.ಡಿ, ಭವಿತ್ ಕುಮಾರ್ ಕೆ, ಗಗನ್ ಜಿ.ಆರ್., ಉನ್ನತ್ ಕೆ., ಭರತ್‌ ಕುಮಾರ್ ಟಿ., ಕಿಶೋರ್ ಎನ್., ಗಗನ್‌ರಾಜ್‌, ಜಿತನ್ ಪಿ.ಜಿ., ಸಚಿನ್ ಕುಮಾರ್ ಎ., ಸುದೀಪ್ ಯು.ಸಿ., ಸಚಿನ್ ಯು. ಮತ್ತು ವಿನೋದ್ ಕೆ. ಹೀಗೆ ಒಟ್ಟು 17 ಜನ ವಿದ್ಯಾರ್ಥಿಗಳು ಆಯ್ಕೆಯಾಗಿರುತ್ತಾರೆ. ಆಯ್ಕೆಯಾದ ವಿದ್ಯಾರ್ಥಿಗಳನ್ನು ಆಡಳಿತ ಮಂಡಳಿ, ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ಮತ್ತು ಸಂಸ್ಥೆಯ ಪ್ರಾಚಾರ್ಯರು, ಹಾಗೂ ಸಿಬ್ಬಂದಿಗಳು ಅಭಿನಂದಿಸಿದ್ದಾರೆ.