ಶ್ರೀ ಕೇಶವ ಕೃಪಾ ವೇದ,ಯೋಗ ಮತ್ತು ಕಲಾ ಶಿಬಿರ ಸಮಾರೋಪ

0

ಮನುಷ್ಯ ಹುಟ್ಟಿನಿಂದ ಶ್ರೇಷ್ಠ ವ್ಯಕ್ತಿ ಯಾಗಲು ಸಾದ್ಯವಿಲ್ಲ ಸಂಸ್ಕಾರಯುತ ಶಿಕ್ಷಣದಿಂದ ಮಾತ್ರ ಶ್ರೇಷ್ಠ ವ್ಯಕ್ತಿಯಾಗಲು ಸಾದ್ಯ: ವಿದ್ಯಾಪ್ರಸನ್ನತೀರ್ಥ ಸ್ವಾಮಿಜಿ

ಶ್ರೀ ಕೇಶವ ಕೃಪಾ ವೇದ ಮತ್ತು ಕಲಾ ಪ್ರತಿಷ್ಠಾನ ಸುಳ್ಯ ಇದರ ಆಶ್ರಯದಲ್ಲಿ ನಡೆದ ಶ್ರೀಕೇಶವ ಕೃಪಾ ವೇದ,ಯೋಗ ಕಲಾ ಶಿಬಿರ ಇದರ ಸಮಾರೋಪ ಸಮಾರಂಭ ಹಾಗೂ ಶ್ರೀ ಕೇರಶವ ಸ್ಮೃತಿ ಪ್ರಶಸ್ತಿ ಪ್ರಧಾನ ಕಾರ್ಯಕ್ರಮ ಮೆ.14 ರಂದು ಸುಳ್ಯ ಹಳೇಗೆಟು ವಿದ್ಯಾನಗರ ಶ್ರೀ ಕೇಶವ ಕಿರಣದಲ್ಲಿ ನಡೆಯಿತು.


ಸಮಾರೋಪ ಸಮಾರಂಭದಲ್ಲಿ ಶ್ರೀ ವಿದ್ಯಾಪ್ರಸನ್ನತೀರ್ಥ ಸ್ವಾಮೀಜಿ ಆಶೀರ್ವಚನ ನೀಡಿ ಒಬ್ಬ ಮನುಷ್ಯ ಶ್ರೇಷ್ಠ ವ್ಯಕ್ತಿ ಆಗಬೇಕಾದರೆ ಹುಟ್ಟಿದ ನಂತರ ಬೆಳೆಯುವಾಗ ಕಾಲ ಕಾಲಕ್ಕೆ ಸಂಸ್ಕಾರಯುತ ಶಿಕ್ಷಣವನ್ನು ಕೊಡುವುದರೊಂದಿಗೆ ಭಾರತೀಯ ಸಂಸ್ಕೃತಿಯ ಶಿಕ್ಷಣವನ್ನು ನೀಡಬೇಕು ಭಾರತೀಯ ಸಂಸ್ಕೃತಿ ಪರಮೋಚ್ಚವಾಗಿದೆ,ಈ ಸಂಸ್ಕೃತಿಯಿಂದ ಜ್ಞಾನ ಪ್ರಬಲಗೊಳ್ಳುತ್ತದೆ ಇದಕ್ಕೆ ಪೂರಕವಾಗಿ ನಾಗರಾಜ ಭಟ್ ರವರು ಇಂತಹ ವೇದ, ಯೋಗ ಶಿಬಿರಗಳನ್ನು ಆಯೋಜಿಸುತ್ತಿದ್ದಾರೆ ಇವರ ಸೇವೆ ಇಲ್ಲಿಗೆ ಬರುವ ಮಕ್ಕಳನ್ನು ಸಂಸ್ಕಾರಯುತ ಮಕ್ಕಳನ್ನಾಗಿ ಮಾರ್ಪಾಡು ಮಾಡುತ್ತಾರೆ.
ಮಕ್ಕಳಿಗೆ ಇಂತಹ ಸಂದರ್ಭದಲ್ಲಿ ಒಳ್ಳೆಯ ವಿದ್ಯೆಯೊಂದಿಗೆ ಸಂಸ್ಕಾರಯುತ ವೇದಪಾಠ,ಯೋಗ,ಮತ್ತು ಕಲಾ ಶಿಬಿರದಲ್ಲಿ ಬಾಗವಹಿಸಿ ಅಲ್ಲಿ ಶಿಕ್ಷಣ ಪಡೆದರೆ ಮುಂದೆ ನಿಮ್ಮ ಮಕ್ಕಳನ್ನು ಒಳ್ಳೆಯ ಮಕ್ಕಳನ್ನಾಗಿ ರೂಪಿಸಲು ಸಾದ್ಯ ಒಬ್ಬ ಮನುಷ್ಯ ಜನ್ಮದಿಂದ ಶ್ರೇಷ್ಠ ವ್ಯಕ್ತಿ ಯಾಗಲು ಸಾದ್ಯವಿಲ್ಲ ಒಳ್ಳೆಯ ಸಂಸ್ಕಾರಯುತ ವಿದ್ಯೆಯಿಂದ ಮಾತ್ರ ಸಾಧ್ಯ ಎಂದವರು ಹೇಳಿದರು.


ಕಾರ್ಯಕ್ರಮದ ಅಧ್ಯಕ್ಷತೆಯನ್ನು ರಾಜ್ಯ ಯೋಗ ಸಂಪನ್ಮೂಲ ವ್ಯಕ್ತಿ ಎಂ.ಎಸ್.ನಾಗರಾಜ ರಾವ್ ವಹಿಸಿದ್ದರು,ಬೆಳಾಲು ಧರ್ಮಸ್ಥಳ ಮಂಜುನಾಥೇಶ್ವರ ಪ್ರೌಢಶಾಲಾ ಮುಖ್ಯೋಪಾಧ್ಯಾಯ ರಾಮಕೃಷ್ಣ ಭಟ್ ಚೂಂತಾರು ಅಭಿನಂದನಾ ಭಾಷಣ ಮಾಡಿದರು. ಪ್ರತಿಷ್ಠಾನದ ಗೌರವಾಧ್ಯಕ್ಷ ಎಂ.ಗೋಪಾಲಕೃಷ್ಣ ಭಟ್ ವಗೆನಾಡು, ವೇದಿಕೆಯಲ್ಲಿದ್ದರು.
ಕೇಶವಕೃಪಾ ವೇದ ಮತ್ತು ಕಲಾ ಪ್ರತಿಷ್ಠಾನ ಇದರ ಅಧ್ಯಕ್ಷ ಶಿಬಿರದ ರೂವಾರಿ ಪುರೋಹಿತ ನಾಗರಾಜ ಭಟ್ ಮಾತನಾಡಿ ಶಿಬಿರದಲ್ಲಿ ಭಾಗವಹಿಸಿದ ಮಕ್ಕಳ ಶಿಸ್ತು ಮತ್ತು ಗುಣನಡತೆ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ ಶಿಬಿರದ ಪ್ರಮಾಣ ಪತ್ರ ವಿತರಿಸಿದರು.

ಬ್ರಹ್ಮ ಶ್ರೀ ಮಿತ್ತೂರು ಪುರೋಹಿತ ತಿಮ್ಮಯ್ಯ ಭಟ್ಟ ಸಂಪ್ರತಿಷ್ಠಾನ (ರಿ.) ಇಡ್ಕಿದು ಇದರ ಅದ್ಯಕ್ಷ ರಮೇಶ್ ಭಟ್ ರವರಿಗೆ , ಕಂಚಿ ಕಾಮಕೋಟಿ ಪೀಠ ಆಸ್ಥಾನದ ವಿದ್ವಾಂಸ, ವಯಲಿನ್ ಕಲಾವಿದ ವಿದ್ವಾನ್ ರಾಜೇಶ್ ಕುಂಭಕ್ಕೋಡು ಅವರಿಗೆ “ಶ್ರೀ ಕೇಶವ ಸ್ಮೃತಿ 2023 ಪ್ರಶಸ್ತಿ” ಪ್ರದಾನ ಮಾಡಲಾಯಿತು.
ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಅತಿಹೆಚ್ಚು ಅಂಕಪಡೆದು ರಾಜ್ಯಕ್ಕೆ ಮೂರನೇ ಸ್ಥಾನ ಪಡೆದ ಪ್ರತಿಭೆ ಆದಿತ್ಯನಾಥರವರಿಗೆ ” ಶ್ರೀ ಕೇಶವ ಸರ್ವ ಪ್ರಥಮ ಯೋಗ್ಯತಾ ಪ್ರಶಸ್ತಿ” ನೀಡಲಾಯಿತು,ಹಾಗೂ ಯಜ್ರುವೇದ ವಿಬಾಗದಲ್ಲಿ ಕಲಿಕೆಯಲ್ಲಿ ಪ್ರಥಮ ಸ್ಥಾನ ಪಡೆದ ವಿದ್ಯಾರ್ಥಿ ಶ್ರೇಯಸ್ ಪಿದಮಲೆಯವರಿಗೆ ಶ್ರೀ ಕೇಶವ ಸರ್ವ ಪ್ರಥಮ ಪ್ರಶಸ್ತಿ, ಋಗ್ವೇದ ವಿಭಾಗದಲ್ಲಿ ಕಲಿಕೆಯಲ್ಲಿ ಪ್ರಥಮ ಸ್ಥಾನ ಪಡೆದ ವಿದ್ಯಾರ್ಥಿ ಆರ್ಯನ್ ಎ ಕೆ ಯವರಿಗೆ ಶ್ರೀ ಕೇಶವ ಸರ್ವ ಪ್ರಥಮ ಪ್ರಶಸ್ತಿ, ಮತ್ತು ಸರ್ವಾಂಗೀಣ ಪ್ರತಿಭಾ ವಿದ್ಯಾರ್ಥಿ ಚಿನ್ಮಯ ರವರಿಗೆ ಶ್ರಿ ಕೇಶವ ಪ್ರತಿಭಾ ಪುರಸ್ಕಾರ ನೀಡಲಾಯಿತು, ಮತ್ತು ಸ್ವಾತಂತ್ರ್ಯದ ಅಮೃತಮಹೋತ್ಸವ ಅಂಗವಾಗಿ ಕೇಂದ್ರ ಸರಕಾರದಿಂದ ನಡೆಸಲಾದ ವೇದ ಪಾಠ, ಕಲಾ ಪಾಠಗಳಲ್ಲಿ ಶಿಭಿರದ ವಿದ್ಯಾರ್ಥಿಗಳು ಭಾಗವಹಿಸಿದ್ದು ಸ್ಮರಣೀಯವಾಗಿಸುವ ನಿಟ್ಟಿನಲ್ಲಿ ಪ್ರಶಸ್ತಿ ಪತ್ರ ಮತ್ತು ಸ್ಮರಣಿಕೆಯನ್ನು ಪ್ರಧಾನ ಮಾಡಲಾಯಿತು .


ಶಿಬಿರದ ಸಂಚಾಲಕ ವೇದ ಮೂರ್ತಿ ಅಭಿರಾಮ ಶರ್ಮ,ವೇದಮೂರ್ತಿ ಸುದರ್ಶನ ಭಟ್,ಯೋಗ ಶಿಕ್ಷಕ ಸಂತೊಷ್ ಮುಂಡಕಜೆ ಯವರನ್ನು ಇದೇ ಸಂದರ್ಭದಲ್ಲಿ ಗೌರವಿಸಲಾಯಿತು.
ಶ್ರೀ ಕೇಶವ ಕೃಪಾದ ಶ್ರೀವತ್ಸ ಸ್ವಾಗತಿಸಿ, ಶ್ರೀ ದೇವಿ ನಾಗರಾಜ್ ಭಟ್ ಕಾರ್ಯಕ್ರಮ ನಿರೂಪಿಸಿದರು.