ವಿನೋಬನಗರ: ಭಾಗೀರಥಿ ಮುರುಳ್ಯ ಹಿರಿಯ ಬಿಜೆಪಿ ಮುಖಂಡ ಉಪೇಂದ್ರ ಕಾಮತ್ ಮನೆಗೆ ಭೇಟಿ

0

ಸುಳ್ಯ ವಿಧಾನಸಭಾ ಕ್ಷೇತ್ರದ ಚುನಾವಣೆಯಲ್ಲಿ ಮೂವತ್ತು ಸಾವಿರಕ್ಕೂ ಅಧಿಕ ಬಹುಮತಗಳಿಂದ ವಿಜಯಿಯಾಗಿ ಮಂಗಳೂರಿನಿಂದ ಸುಳ್ಯಕ್ಕೆ ಬರುತ್ತಿದ್ದ ಭಾಗೀರಥಿ ಮುರುಳ್ಯ ಅವರು ಜಾಲ್ಸೂರು ಗ್ರಾಮದ ವಿನೋಬನಗರದಲ್ಲಿರುವ ಹಿರಿಯ ಬಿಜೆಪಿ ಮುಖಂಡ ಉಪೇಂದ್ರ ಕಾಮತ್ ಅವರ ಮನೆಗೆ ಭೇಟಿ ಮಾಡಿ ಆಶೀರ್ವಾದ ಪಡೆದುಕೊಂಡರು.


ಈ ಸಂದರ್ಭದಲ್ಲಿ ಸುಳ್ಯ ಬಿಜೆಪಿ ಮಂಡಲ ಸಮಿತಿ ಅಧ್ಯಕ್ಷ ಹರೀಶ್ ಕಂಜಿಪಿಲಿ, ಶ್ರೀಮತಿ ಪದ್ಮಾವತಿ ಕಾಮತ್, ಸುಧಾಕರ ಕಾಮತ್ ಸೇರಿದಂತೆ ಬಿಜೆಪಿ ಕಾರ್ಯಕರ್ತರು ಉಪಸ್ಥಿತರಿದ್ದರು.