ಬೆಳ್ಳಾರೆ ಹಿದಾಯತುಲ್ ಇಸ್ಲಾಂ ಮದ್ರಸಾದಲ್ಲಿ ಅಧ್ಯಯನ ವರ್ಷಾರಂಭ

0

ಹಿದಾಯತುಲ್ ಇಸ್ಲಾಂ ಸೆಕೆಂಡರಿ ಮದ್ರಸ ಬೆಳ್ಳಾರೆ ಇದರ 2023/24 ನೇ ಶೈಕ್ಷಣಿಕ ವರ್ಷಾರಂಭೋತ್ಸವ ಮಿಹ್ರಜಾನುಲ್ ಬಿದಾಯ ಕಾರ್ಯಕ್ರಮ ಇಂದು ನಡೆಯಿತು.

ಮುಖ್ಯೋಪಾಧ್ಯಾಯರಾದ ಬಹು ಮುಹಮ್ಮದ್ ಮುಸ್ಲಿಯಾರ್ ರವರ ನೇತೃತ್ವದಲ್ಲಿ ನಡೆದ ಕಾರ್ಯಕ್ರಮದಲ್ಲಿ ಬಹು ಹಸೈನಾರ್ ಮುಸ್ಲಿಯಾರ್ ಪ್ರಾರ್ಥನೆ ನೆರವೇರಿಸಿದರು. ವೇದಿಕೆಯಲ್ಲಿ ಅಧ್ಯಾಪಕರುಗಳಾದ ಬಹು ಝೈನುದ್ದೀನ್ ಮುಸ್ಲಿಯಾರ್, ಬಹು. ಸುಲೈಮಾನ್ ಮುಸ್ಲಿಯಾರ್, ಬಹು.ಶಮೀಮ್ ಹುದವಿ, ಮುಂತಾದವರು ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಹಾಗೂ ರಕ್ಷಕರು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.