ಓಡಬಾಯಿಯಿಂದ ಕಳವಾದ ಬೈಕ್ ಪತ್ತೆ

0

ಸುಳ್ಯ ಓಡಬಾಯಿಯಿಂದ ನಿನ್ನೆ ರಾತ್ರಿ ಕಳವಾದ ಬೈಕೊಂದು ಇಂದು ಜ್ಯೋತಿ ಸರ್ಕಲ್ ಬಳಿ ಪತ್ತೆಯಾದ ಘಟನೆ ವರದಿಯಾಗಿದೆ.
ದೇವಚಳ್ಳ ಗ್ರಾಮದ ಬಾಜಿನಡ್ಕ ಪುನಿತ್ ಎಂಬವರಿಗೆ ಸೇರಿದ ಯಮಹಾ ಕ್ರಕ್ಸ್ ಬೈಕ್( ಕೆ.ಎ.21- ಕ್ಯು- 6668)ನ್ನು ಅವರ ಸಹೋದರ ನಿನ್ನೆ ರಾತ್ರಿ 9.30ರ ವೇಳೆಗೆ ಓಡಬಾಯಿ ರಸ್ತೆ ಬದಿ ನಿಲ್ಲಿಸಿ ಹೋಗಿದ್ದರು. ಪುನಃ ಬಂದು ನೋಡುವಾಗ ಬೈಕ್ ಇರಲಿಲ್ಲ. ಎಲ್ಲಾ ಕಡೆ ಹುಡುಕಿದರೂ ಬೈಕ್ ಪತ್ತೆಯಾಗಲಿಲ್ಲ.

ಸುಳ್ಯ ಪೋಲಿಸರಿಗೂ ದೂರು ನೀಡಿದರು.ವಾಟ್ಸಪ್ ಗ್ರೂಪ್ ಗಳಿಗೂ ಶೇರ್ ಮಾಡಿದರು. ಇಂದು ಬೆಳಿಗ್ಗೆ ಆ ಬೈಕ್ ಜ್ಯೋತಿ ಸರ್ಕಲ್ ಬಳಿ ಪತ್ತೆಯಾಗಿರುವುದಾಗಿ ತಿಳಿದುಬಂದಿದೆ.