ಅಜ್ಜಾವರದಲ್ಲಿ ’ರಂಗೋಲಿ’ ಬೇಸಿಗೆ ಶಿಬಿರ ಉದ್ಘಾಟನೆ

0


ಜೆಸಿಐ ಸುಳ್ಯ ಪಯಸ್ವಿನಿ (ರಿ.)ಸುಳ್ಯ ಹಾಗೂ ಪ್ರತಾಪ ಯುವಕ ಮಂಡಲ ಮತ್ತು ಚೈತ್ರ ಯುವತಿ ಮಂಡಲ ಅಜ್ಜಾವರ ಇವುಗಳ ಸಂಯುಕ್ತ ಆಶ್ರಯದಲ್ಲಿ ಒಂದು ವಾರದ ಬೇಸಿಗೆ ಶಿಬಿರ “ರಂಗೋಲಿ”ಎಂಬ ನಾಮಧೇಯದೊಂದಿಗೆ ಮೇ. ೧೭ ರಂದು ಸರಕಾರಿ ಪ್ರೌಢಶಾಲೆ ಅಜ್ಜಾವರದಲ್ಲಿ ಉದ್ಘಾಟನೆಗೊಂಡಿತು. ಈ ಶಿಬಿರವನ್ನು ಜೆಸಿಐ ಭಾರತ ವಲಯ ೧೫ ರ ಕಾರ್ಯಕ್ರಮ ವಿಭಾಗದ ನಿರ್ದೇಶಕಿ ಜೆಸಿ ಸೆನೆಟರ್ ಅಕ್ಷತಾ ಗಿರೀಶ್ ರವರು ಉದ್ಘಾಟಿಸಿದರು. ಜೆಸಿಐ ಸುಳ್ಯ ಪಯಸ್ವಿನಿ ಘಟಕದ ಅಧ್ಯಕ್ಷ ನವೀನಕುಮಾರ್ ಇವರ ಅಧ್ಯಕ್ಷತೆಯಲ್ಲಿ ನಡೆದ ಈ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಯುವಜನ ಸಂಯುಕ್ತ ಮಂಡಳಿಯ ಅಧ್ಯಕ್ಷರಾದ ತೇಜಸ್ವಿ ಕಡಪಾಲ ಹಾಗೂ ಸರಕಾರಿ ಪ್ರೌಢಶಾಲೆ ಮುಖ್ಯ ಶಿಕ್ಷಕರಾದ ಗೋಪಿನಾಥ್ ಮಿತ್ತಡ್ಕ ರವರು ಪಾಲ್ಗೊಂಡಿದ್ದರು.


ಸಮಾರಂಭದ ವೇದಿಕೆಯಲ್ಲಿ ವಲಯ ೧೫ ರ ಉಪಾಧ್ಯಕ್ಷ ದೇವರಾಜ್ ಕುದ್ಪಾಜೆ, ಪ್ರತಾಪ ಯುವಕ ಮಂಡಲದ ಅಧ್ಯಕ್ಷರಾದ ಗುರುರಾಜ್ ಅಜ್ಜಾವರ, ಚೈತ್ರ ಯುವತಿ ಮಂಡಲ ದ ಅಧ್ಯಕ್ಷೆ ಶಶ್ಮಿ ಭಟ್ ಹಾಗೂ ನಿಕಟ ಪೂರ್ವಧ್ಯಕ್ಷ ಜೆಸಿ ರಂಜಿತ್ ಕುಕ್ಕೇಟಿ ಮತ್ತು ಶಿಬಿರದ ಸಂಪನ್ಮೂಲ ವ್ಯಕ್ತಿ ಮಾಯಿಲಪ್ಪ ಮಂಡೆಕೋಲು ಉಪಸ್ಥಿತರಿದ್ದರು.ಲೋಕೇಶ್ ಮಾವಿನಪಲ್ಲರವರ ಜೇಸಿ ವಾಣಿ ಯೊಂದಿಗೆ ಆರಂಭ ಗೊಂಡ ಈ ಕಾರ್ಯಕ್ರಮವು ಜೇಸಿ ಸುರೇಶ್ ಕಾಮತ್ ವೇದಿಕೆ ಗೆ ಅವ್ಹಾನಿಸಿದರು. ರಂಜಿತ್ ಕುಕ್ಕೇಟಿ ವಂದಿಸಿದರು.ದಿನಾಂಕ ೧೭.೦೫.೨೦೨೩ ರಿಂದ ೨೩.೦೫.೨೦೨೩ ರ ವರೆಗೂ ನಡೆಯುವ ೬ ರಿಂದ ೧೬ ವರ್ಷ ವಯಸ್ಸಿನ ಸುಮಾರು ೫೫ ವಿದ್ಯಾರ್ಥಿಗಳು ಪಾಲ್ಗೊಂಡಿದ್ದಾರೆ.ನಿರಂತರ ೭ ದಿವಸ ನಡೆಯುವ ಈ ಶಿಬಿರದಲ್ಲಿ ನುರಿತ ಸಂಪನ್ಮೂಲ ವ್ಯಕ್ತಿಗಳಿಂದ ಮಕ್ಕಳಿಗೆ ಹಾಡು, ನೃತ್ಯ, ಮುಖವಾಡ ತಯಾರಿಕೆ, ನಾಟಕ, ಅಭಿನಯ ಗೀತೆ,ಬಾಟಲ್ ಪೇಂಟಿಂಗ್, ಪೆನ್ಸಿಲ್ ಶೇಡಿಂಗ್ ಹೀಗೆ ವಿವಿಧ ಬಗೆಯ ಕಲಾ ಪ್ರಕಾರಗಳನ್ನು ಕಲಿಸಿಕೊಡಲಾಗುವುದು.