Home Uncategorized ಅಡ್ಪಂಗಾಯ ಅಯ್ಯಪ್ಪ ಮಂದಿರದಲ್ಲಿ ವೃಷಭ ಸಂಕ್ರಮಣದ ಪ್ರಯುಕ್ತ ದುರ್ಗಾಪೂಜೆ

ಅಡ್ಪಂಗಾಯ ಅಯ್ಯಪ್ಪ ಮಂದಿರದಲ್ಲಿ ವೃಷಭ ಸಂಕ್ರಮಣದ ಪ್ರಯುಕ್ತ ದುರ್ಗಾಪೂಜೆ

0


ಅಡ್ಪಂಗಾಯ ಅಯ್ಯಪ್ಪ ಮಂದಿರದಲ್ಲಿ ವೃಷಭ ಸಂಕ್ರಮಣದ ಪ್ರಯುಕ್ತ ದುರ್ಗಾಪೂಜೆ ಹಾಗೂ ಸಂಕ್ರಮಣ ಪೂಜಾ ಕಾರ್ಯಕ್ರಮವು ಮೇ.17ರಂದು ನಡೆಯಿತು.

ಪ್ರಾತಃ ಕಾಲ ಗಣಪತಿ ಹವನದೊಂದಿಗೆ ಪ್ರಾರಂಭವಾದ ಈ ಕಾರ್ಯಕ್ರಮವು, ಸಾಯಂಕಾಲ ಗಂಟೆ 6-00ಕ್ಕೆ ಸರಿಯಾಗಿ, ಶ್ರೀ ಕ್ಷೇತ್ರದ ಧರ್ಮದರ್ಶಿಗಳಾದ ಶಿವಪ್ರಕಾಶ್ ಗುರುಸ್ವಾಮಿಗಳ ನೇತೃತ್ವದಲ್ಲಿ ದೀಪರಾಧನೆ ಕಾರ್ಯಕ್ರಮದೊಂದಿಗೆ ಸಾಗಿತು. ನಂತರ ಶ್ರೀಮತಿ ಸಂಧ್ಯಾ ಮಂಡೆಕೋಲು ಹಾಗೂ ಬಳಗದವರಿಂದ ಭಜನಾ ಕಾರ್ಯಕ್ರಮ ನಡೆಯಿತು. ದುರ್ಗಾಪೂಜೆಯು ಕಲ್ಲಡ್ಕ-ಪೆರ್ಲಂಪಾಡಿ ಕುಟುಂಬಸ್ಥರ ಹಾಗೂ ಉಡುಪಿ ಗಾರ್ಡನ್ ಹೋಟೆಲ್ ಮಾಲಕರಾದ ಶಂಕರ ಪೂಜಾರಿ ಇವರುಗಳ ಸೇವಾ ರೂಪದಲ್ಲಿ ನಡೆಯಿತು.

ನಂತರ ನಡೆದ ಶ್ರೀ ಅಯ್ಯಪ್ಪ ಸ್ವಾಮಿಯ ಮಹಾಪೂಜಾ ಕಾರ್ಯಕ್ರಮ, ಶ್ರೀ ದೇವರ ಪ್ರಸಾದ ವಿತರಣಾ ಕಾರ್ಯಕ್ರಮವು ಸಾರ್ವಜನಿಕ ಅನ್ನ ಸಂತರ್ಪಣೆಯೊಂದಿಗೆ ಮುಕ್ತಾಯವಾಯಿತು. ಅನ್ನಸಂತರ್ಪಣಾ ಸೇವೆಯನ್ನು ಉಡುಪಿ ಗಾರ್ಡನ್ ಹೋಟೆಲ್ ಮಾಲಕರಾದ ಶಂಕರ ಪೂಜಾರಿ ಹಾಗೂ ಅಯ್ಯಪ್ಪ ವ್ರತಧಾರಿಯಾಗಿದ್ದ ಶಿವಪ್ರಸಾದ್ ಅಡ್ಪಂಗಾಯ ಇವರುಗಳು ಒದಗಿಸಿದ್ದರು.

ಈ ಸಂದರ್ಭದಲ್ಲಿ, ಅಯ್ಯಪ್ಪ ವ್ರತಧಾರಿಗಳು ಹಾಗೂ ಊರ -ಪರ ಊರಿನ ಭಕ್ತಾಧಿಗಳು ಹಾಜರಿದ್ದರು.

NO COMMENTS

error: Content is protected !!
Breaking