ಮತ್ತೆ ಚಲಾವಣೆಯಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿರುವ 2 ಸಾವಿರದ ಪಿಂಕ್ ನೋಟ್

0

ವ್ಯಾಪಾರ ವೈವಾಟುಗಳಲ್ಲಿ ಹಠಾತಾಗಿ ಪ್ರತ್ಯಕ್ಷಗೊಂಡು ಸಂಚಲನ

ಕಳೆದ ಎರಡು ವರ್ಷಗಳಿಂದ ಮಾರುಕಟ್ಟೆಯಲ್ಲಿ ಹೆಚ್ಚಾಗಿ ಕಾಣಲು ಸಿಗದಂತಹ 2 ಸಾವಿರ ರೂಪಾಯಿಯ ಪಿಂಕ್ ನೋಟ್ ಇದೀಗ ಮಾರುಕಟ್ಟೆಯಲ್ಲಿ ಮತ್ತೆ ಚಲಾವಣೆಗೆ ವೇಗವನ್ನು ನೀಡಿದೆ.
ಇದಕ್ಕೆ ಕಾರಣ ಆರ್ ಬಿ ಐ 2000 ನೋಟ್ ಅನ್ನು ಸ್ಥಗಿತ ಗೊಳಿಸಲು ಮುಂದುವರೆದದ್ದು.
ಸುಳ್ಯದ ನಾನಾ ಕಡೆಗಳಲ್ಲಿ 2000 ರೂಪಾಯಿಯದ್ದೆ ಸದ್ದು ಮೊಳಗತೊಡಗಿದೆ. ಕೆಲವರು ಬ್ಯಾಂಕ್ ಪಿಗ್ಮಿ ಮುಂತಾದ ಕಡೆಗಳಲ್ಲಿ ತಮ್ಮಲ್ಲಿರುವ ರುಪಾಯಿಗಳನ್ನು ನೀಡಲು ಮುಂದಾದರೆ, ಮತ್ತೆ ಕೆಲವರು ಪೆಟ್ರೋಲ್ ಬಂಕ್ ಗಳಲ್ಲಿ ನೋಟ್ ವಿನಿಮಯ ಮಾಡಲು ಮುಂದಾಗಿದ್ದು ಕಂಡುಬರುತ್ತದೆ.
ಕೇವಲ ಅಂಗಡಿ ಮುಂಗಟುಗಳು ಮಾತ್ರವಲ್ಲದೆ ಚಿನ್ನದ ಅಂಗಡಿಗಳಲ್ಲಿಯೂ ಈ ನೋಟಿನ ಕಾರುಬಾರು ಜಾಸ್ತಿಯಾಗ ತೊಡಗಿದೆ. ಚಿನ್ನವನ್ನು ಖರೀದಿಸಲು ಜನರು ಇದೀಗ ಈ ನೋಟುಗಳನ್ನು ಬಳಸಿಕೊಳ್ಳುತ್ತಿದ್ದಾರೆ. ಮಾಯವಾಗಿದ್ದ ನೋಟು ಜನರ ಕೈಯಲ್ಲಿ ಪ್ರತ್ಯಕ್ಷ ಗೊಳ್ಳುತ್ತಿದೆ.
ಈ ನೋಟನ್ನು ಬದಲಿಸಿಕೊಳ್ಳಲು ಎಸ್ ಬಿ ಐ ಬ್ಯಾಂಕಿನಿಂದ ಸರಳ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ಫಾರಂ ಭರ್ತಿ ಮಾಡಬೇಕೆಂದು ಇಲ್ಲ, ಶುಲ್ಕ ಪಾವತಿಸುವಂತಿಲ್ಲ ಎಂದು ತಿಳಿದು ಬಂದಿದೆ.
ನೋಟನ್ನು ಬ್ಯಾಂಕುಗಳಲ್ಲಿ ವಿನಿಮಯ ಮಾಡಿಕೊಳ್ಳಲು ಇನ್ನೂ ಕೂಡ ಸುಮಾರು ಮೂರು ತಿಂಗಳಿಗಿಂತ ಹೆಚ್ಚು ಕಾಲಾವಕಾಶವಿದ್ದು ಸಾರ್ವಜನಿಕರು ಆತಂಕ ಪಡುವ ಅವಶ್ಯಕತೆ ಇಲ್ಲ ಎಂದು ಬ್ಯಾಂಕಿನವರು ಜನರಿಗೆ ಧೈರ್ಯವನ್ನು ನೀಡುತ್ತಿದ್ದಾರೆ.