ನೂತನ ವಿಧಾನಸಭಾ ಸ್ಪೀಕರ್​ ಆಗಿ ಯು.ಟಿ. ಖಾದರ್ ಅವಿರೋಧ ಆಯ್ಕೆ

0

ನೂತನ ವಿಧಾನಸಭಾ ಸ್ಪೀಕರ್​ ಆಗಿ ಯು.ಟಿ. ಖಾದರ್​ ಅವರು ಅವಿರೋಧವಾಗಿ ಆಯ್ಕೆಯಾಗಿದ್ದು, ಸಭಾಧ್ಯಕ್ಷ ಪೀಠವನ್ನು ಅಲಂಕರಿಸಿದ್ದಾರೆ.
ವಿಧಾನಸಭಾಧ್ಯಕ್ಷ ಸ್ಥಾನಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಯು.ಟಿ. ಖಾದರ್​ ಅವರ ಹೆಸರನ್ನು ಸದನದಲ್ಲಿಂದು ಸೂಚಿಸಿದರು. ಬಳಿಕ ಉಪಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್ ಅವರು ಖಾದರ್​ ಹೆಸರನ್ನು ಅನುಮೋದಿಸಿದರು. ನಂತರ ಬಹುಮತದ ಮೂಲಕ ಖಾದರ್​ ಅವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು.


ಆಯ್ಕೆಯಾದ ಬಳಿಕ ಹಂಗಾಮಿ ಸ್ಪೀಕರ್​ ಆರ್​.ವಿ. ದೇಶಪಾಂಡೆ ಅವರು ಸಭಾಧ್ಯಕ್ಷರ ಹೆಸರನ್ನು ಸದನದಲ್ಲಿ ಘೋಷಣೆ ಮಾಡಿದರು. ನಂತರ ಯು.ಟಿ. ಖಾದರ್​ ಅವರು ಸಭಾಧ್ಯಕ್ಷ ಪೀಠವನ್ನು ಅಲಂಕರಿಸಿದರು.

ಸ್ಪೀಕರ್​ ಆಗಿ ಅಧಿಕಾರ ವಹಿಸಿಕೊಂಡು ಖಾದರ್​ ಅವರನ್ನು ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ. ಶಿವಕುಮಾರ್, ಆರ್​.ವಿ. ದೇಶಪಾಂಡೆ ಹಾಗೂ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಅವರು ಅಭಿನಂದಿಸಿದರು.